ಕೊರೋನಾ ಮಾಹಾರಿ ವಿರುದ್ದದ ಹೋರಾಟದಲ್ಲಿ ಉಳಿಯುವುದು ಎರಡೇ ಎರಡು ದೇಶ…?

ಕೊರೋನಾ ಮಾಹಾರಿ ವಿರುದ್ದದ ಹೋರಾಟದಲ್ಲಿ ಉಳಿಯುವುದು ಎರಡೇ ಎರಡು ದೇಶ…?

ವಿಶ್ವವನ್ನಿ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ದದ ಹೋರಟದಲ್ಲಿ ಅನೇಕ ದೇಶಗಳು ಈಗಾಗಲೇ ತಮ್ಮ ಕೈಚೆಲ್ಲಿ ಕುಳಿತಿವೆ. ಆದ್ರೆ ಈ ಹೋರಟದಲ್ಲಿ ಜಯಗಳಿಸಿ ಕೊನೆಗೆ ಸ್ಥರವಾಗಿ ಉಳಿಯುವುದು ಎರಡೇ ಎರಡು ದೇಶವಂತೆ. ಹಾಗಾದ್ರೆ ಆ ಎರಡು ದೇಶಗಳು ಯಾವುದು ಗೊತ್ತಾ…?

ಹೌದು ವಿಶ್ವದ ದೊಡ್ಡನ ಅಮೇರಿಕಾ ದೇಶದಲ್ಲಿ ಒಂದು ಲಕ್ಷ ಸಾವು ದಾಟದಂತೆ ನೋಡಿಕೊಳ್ಳುವುದೇ ಅದರ ಮೊದಲ ಆದ್ಯತವಾಗಿದೆ. ಹೌದು ಹೀಗಂತೆ ಅಮೇರಿಕಾದ ಅಧ್ಯಕ್ಷ ಟ್ರಂಪ್ ಸ್ವತಃ ಈ ಮಾತನ್ನು ಹೇಳಿದ್ದಾರೆ. ಅಷ್ಟೊಂದು ಶ್ರೀಮಂತ ರಾಷ್ಟ್ರದಲ್ಲಿ ಅಷ್ಟೊಂದು ಸಾವು ನೋವು ನಮ್ಮಂತ 130 ಕೋಟಿ ಜನ ಸಂಖ್ಯ ಇರುವ ದೇಶದ ಪರಿಸ್ಥಿತಿ ಹೇಗೆ ಎನ್ನುವ ಚಿಂತೆ ಎಲ್ಲರಲ್ಲಿ ಮನೆಮಾಡಿದೆ.

 ಹೌದು ವಿಶ್ಯದ ಶ್ರೀಮಂತ ರಾಷ್ಟ್ರಗಳು ಕೊರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಆಗಿ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಇಟಲಿ ಅಮೇರಿಕಾ ಬ್ರಿಟನ್ ಇನ್ನು ಆರು  ತಿಂಗಳ ಕಾಲ ಲಾಕ್ ಡೌನ್ ಮಾಡದ ಹೊರತು ಬೇರೆ ದಾರಿಯೇ ಈ ದೇಶಗಳಿಗೆ ಇಲ್ಲಾ. ಹಾಗಾದ್ರ ಭಾರತದಲ್ಲಿ ಲಾಕ್ ಡೌನ್ ಆಗಿ ಈಗ 15 ದಿನಗಳು ಮಾತ್ರಕಳಿದಿವೆ ಎನ್ನಬಹುದು, ಆದ್ರೆ ಭಾರತವೂ ಇನ್ನು 6 ತಿಂಗಳ ಕಲಾ ಲಾಕ್ ಡೌನ್ ಅಗಬಹುದಾ ಎನ್ನಬಹುದು? ಭಾರತದಲ್ಲಿ ಈಗಿನ ಪರೀಸ್ಥಿತಿ ನೋಡಿದ್ರೆ ಈ ವೈರಸ್ ಸಮುದಾಯದ ಮಟ್ಟಕ್ಕೆ ಹೋಗಿಲ್ಲಾ, ದೇಶದಲ್ಲಿ ಈ ವರೆಗೂ ದಾಖಲಾಗಿರುವ ಪ್ರಕರಣಗಳನ್ನು ನೋಡಿದ್ರೆ ಕೆಲ ಪ್ರಕರಣಗಳನ್ನು ಹೊರತು ಪಡಿಸಿದ್ರೆ ವೈರಸ್ ಸಮುದಾಯದ ಮಟ್ಟಕ್ಕೆ ಹರಡಿಲ್ಲಾ. ಹೀಗಾಗಿ ಭಾರತ ಸದ್ಯಕ್ಕೆ ಎರಡನೇ ಹಂತವನ್ನು ದಾಟಿಲ್ಲ. ಹೀಗಾಗಿ ಭಾರತ ಹೆಚ್ಚು ಅಂದ್ರೆ ಇನ್ನು ಒಂದು ತಿಂಗಳು ಅಂದ್ರೆ ಮೇ ಮೊದಲ ವಾರದಲ್ಲೊಇ ಭಾರತದಲ್ಲಿ ಕೊರೋನಾ ವೈರಸ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನು ಭಾರತದಲ್ಲಿ 6 ತಿಂಗಳ ಕಾಲ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲಾ ಎನಿಸುತ್ತೆ.

ಈ ಮೊದಲೇ ಹೇಳಿದ ಹಾಗೆ ವಿಶ್ವದಲ್ಲಿ ಎರಡೇ ಎರಡು ದೇಶಗಳು ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಗೆಲ್ಲಬಹುದು ಎನ್ನುವುದಕ್ಕೆ ಇಲ್ಲಿದೆ ಉತ್ತರ. ಹೌದು ಈ ವಿಶ್ವವನ್ನು ಕಾಡುತ್ತಿರುವ ವೈರಸ್ ದೇಶದಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿ,  ದೇಶಗಳು ಲಾಕ್ ಡೌನ್ ಆಗುತ್ತೆ.  ಆಗ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿಯುತ್ತೆ. ಹೀಗಾಗಿ ಜನರಿಗೆ ಹಣ ಸಿಗದೆ ಆಹಾರ ಸಿಗದೇ ದೇಶಗಳ ಅದೋ ಗತಿಗೆ ಹೋಗಿ ಬಿಡುತ್ತೆವೆ. ಆಯಾ ದೇಶಗಳ ತಮ್ಮ ವಿಪತ್ತು ನಿರ್ವಹನೆಗೆ ತೆಗೆದಿಟ್ಟ ಹಣವನ್ನು  ಅನಿವಾರ್ಯವಾಗಿ ಬಳಸಬೇಕಾಗುತ್ತೆ. ಆದ್ರೆ ಆ ಹಣ ಒಂದು ತಿಂಗಳು ಇಲ್ಲಾ ಮೂರು ತಿಂಗಳಕ್ಕೆ ಆಗಬಹು ಆದ್ರೆ ಆರು ತಿಂಗಳು ಇಲ್ಲವೇ ಅದಕ್ಕೂ ಹೆಚ್ಚಿನ ಕಾಲ ಲಾಕ್ ಡೌನ್ ಆದ್ರೆ ಆ ದೇಶ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿ ದೇಶದಲ್ಲಿ ಅರಾಜಕಥೆ ಉಂಟಾಗುತ್ತೆ. ಆದ್ರೆ ಭಾರತ ಮತ್ತು ಚೀನಾ ದೇಶಕ್ಕೆ ಈ ಸ್ಥಿತಿ ಬರುವುದಿಲ್ಲ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು, ಯಾಕಂದ್ರೆ ಭಾರತ ಹೆಚ್ಚು ಅಂದ್ರೆ ಇನ್ನು ಒಂದು ತಿಂಗಳ ಕಾಲ ಲಾಕ್ ಡೌನ್ ಆಗಬಹುದು ಹೀಗಾಗಿ ದೇಶದ ಅರ್ಥಿಕ ಸ್ಥಿತಿಯ ಮೇಲೆ ಹೆಚ್ಚಾಗಿ ಹೊಡತೆ ಬೀಳಲ್ಲಾ (ಉಳಿದ ದೇಶಗಳಿಗೆ ಹೋಲಿಸಿದಂತೆ). ಹೀಗಾಗಿ ಭಾರತ ಉಳಿದ ದೇಶಕ್ಕೆ ಹೇಲಿಸಿದ್ರೆ ಹೆಚ್ಚು ಸುಭದ್ರವಾಗಿದೆ. ಇನ್ನು ಭಾರತಕ್ಕಿಂತ ಹೆಚ್ಚು ಸುಭ್ರವಾಗಿರುವ ರಾಷ್ಟ್ರ ಅಂದ್ರೆ ಅದು ಚೀನಾ. ಯಾಕಂದ್ರೆ ಚೀನಾ ಈಗಾಗಲೇ ಕೊರೋನಾ ವೈರಸ್ ಹತೊಟೆಗೆ ಬಂದಿದೆ. ಅಲ್ಲದೇ ಊಹಾನ್ ಸೇರಿದಂತೆ ಮೂರು ಪ್ರದೇಶಗಳನ್ನು ಹೊರತು ಪಡಿಸಿ ಉಳಿದ ಪ್ರದೇಶದಲ್ಲಿ ಕೊರೋನಾ ವೈರಸ್ ಹರಡಿಲ್ಲಾ ಮೇಲಾಗಿ ಚೈನಾದ ಆ ಪ್ರದೇಶಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಚೈನದ ಮೇಲೆ ಈ ಹೊಡತೆ ಬೀಳಲ್ಲಾ. ಇದಕ್ಕೂ ಮೇಲಾಗಿ ಚೈನ ತನ್ನ ವಸಹತ್ತುಗಳನ್ನು ವಿಶ್ವದ ನಾನಾ ಕಡೆಗಳಲ್ಲಿ ಸ್ಥಾಪಿಸಿದೆ.  ಹೀಗಾಗಿ ಸುಭದ್ರ ಸ್ಥತಿಯಲ್ಲಿ ಇರುವ ಚೈನಾದ ಮೇಲೆ ಎಲ್ಲ ರಾಷ್ಟ್ರಗಳು ಅವಲಂಭನೆ ಆಗುವು ಸ್ಥಿತಿ ಈಗಾಗಲೇ ಬಂದಿದೆ. ಬಹುತೇಕ ದಿನ ಬಳಕೆ ವಸ್ಥುಗಳಿಂದ ಹಿಡಿದು ವೈರಸ್ ಸೋಂಕಿತ ಚಿಕಿತ್ಸೆಗೆ ಬೇಕಿರುವ ವೆಂಟಿಲೇಟರ್ ಗಳ ತಯಾರಿಕೆಯಲ್ಲಿ ಚೈನಾ ಮುಂದಿದೆ. ಈಗಾಗಲೇ ಚೈನಾದಲ್ಲಿ ತಯಾರಾಗುವ ವೆಂಟಿಲೇಟರ್ ಖರೀದಿ ಮಾಡಲು ಬಡ ರಾಷ್ಟ್ರಗಳು ಸೇರಿದಂತೆ ವಿಶ್ವದ ದೊಡ್ಡನ್ನ ಸಹ ಅಮೇರಿಕಾ ಸಹ ಮುಂದೆಬಂದಿದೆ. ಹೀಗಾಗಿ ಚೈನಾದ ಆರ್ಥಿಕಸ್ಥಿತಿ ಮತಷ್ಟು ಸುಭದ್ರವಾಗಲಿದೆ. ಅಲ್ಲದೇ ಕೋವಿಡ್ 19 ಈ ವೈರಸ್ ಚೈನಾ ದೇಶವನ್ನು ಸಂಪೂರ್ಣವಾಗಿ ಅವರಿಸಿಲ್ಲಾ, ಕೆಲ ಪ್ರದೇಶವನ್ನು ಹೊರತು ಪಡಿಸಿ ಚೈನಾ ಎಂದಿನಂತೆ ಇದೆ. ಹೀಗಾಗೆ ಚೈನಾ ದೇಶ ಸುಭದ್ರವಾಗಿಯೇ ಇರಲಿದೆ.

ಭಾರತ ಆರ್ಥಿಕ ಸ್ಥಿತಿ ಚೇರಿಕೆ ಕಾನಲು ಎಷ್ಟು ಕಾಲ ಬೇಕು..?

ಭಾರತದಲ್ಲಿ 1 ದಿನ ಲಾಕ್ ಡೌನ್ ಆದ್ರೆ ಸಾವಿರಾರು ಕೋಟಿ ನಷ್ಟ ಆಗಲಿದೆ. ಸದ್ಯದ ಪರಿಸ್ಥತಿಯಲ್ಲಿ ಒಂದು ಅಥವಾ ಎರಡು ತಿಂಗಳ ಕಾಲ ಲಾಕ್ ಡೌನ್ ಆದರೂ ದೇಶಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲಾ. ಯಾಕಂದ್ರೆ ದೇಶದ ಆರ್ಥಿಕ ಸ್ಥಿತಿಯನ್ನು ನಿರ್ಧಾರ ಮಾಡುವುದು ರಪ್ತು ಆಧಾರದಿಂದ ಅಲ್ಲ, ಇನ್ನು  2015-16 ರಲ್ಲಿ ದೇಶದ ಆದಾಯದಲ್ಲಿ ರಪ್ತಿನಿಂದ ದೇಶಕ್ಕೆ ಆದ ಲಾಭ ಕೇವಲ 15% ರಷ್ಟು ಮಾತ್ರ , ಇನ್ನು 2018-19 ರಲ್ಲಿ ಈ ಲಾಭ 11% ರಷ್ಟು ಮಾತ್ರ , ಹೀಗಾಗಿ ರಪ್ತು ಕುಂಟಿತವಾದ್ರೂ ದೇಶದ ಆರ್ಥಿಕತೆಯ ಮೇಲೆ ಅಷ್ಟೇನು ತೊಂದರೆ ಆಗದು. ಇನ್ನು ದೇಶದಲ್ಲಿ ತಯಾರಾಗುವ ಔಷದಿಗೆ ವಿಶ್ವದಲ್ಲಿ ಬೇಡಿಕೆ ಹೆಚ್ಚಿದೆ. ಅಲ್ಲದೇ ದೇಶ ಆಮದು ಮಾಡಿಕೋಳ್ಳುಲು ಹೆಚ್ಚಿಗೆ ಖರ್ಚು ಮಾಡುವುದು ತೈಲಕ್ಕೆ, ಆದ್ರೆ ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಆಗಿದ್ದು ದೇಶದ ಹಣ ಹೆಚ್ಚಾಗಿ ವಿದೇಶಕ್ಕೆ ಹರಿದು ಹೋಗದು. ಹೀಗಾಗಿ ದೇಶ ಆದಷ್ಟು ಬೇಗ ಚೇರಿಕೆ ಕಾಣಬಹುದು. ಅದೇನೆ ಇದ್ರು ದೇಶದಲ್ಲಿ ವೈರಸ್ ಸಮುದಾಯಕ್ಕೆ ಹರಡದೇ ಇದ್ರೆ ಈ ಎಲ್ಲ ವಿಶ್ಲೇಷಣೆಗಳು ನಿಜವಾಗುತ್ತೆ ಆದ್ರೆ ಜನರ ಸರ್ಕಾರ ತೆಗೆದುಕೊಳ್ಳು ನಿರ್ಧಾರಕ್ಕೆ ಬದ್ದವಾಗಿ ನೆಡೆದುಕೊಂಡ್ರೆ ದೇಶ ಮತ್ತಷ್ಟು ಬೇಗ ಈ ಮಾಹಾ ಮಾರಿಯ ವಿರುದ್ಧದ ಹೋರಾಟದಲ್ಲಿ ಗೆಲ್ಲಬಹುದು           

Previous ಮನೆಯಿಂದ ಹೊರಗೆ ಬಾರದಂತೆ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಆದೇಶ.
Next ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು .

You might also like

0 Comments

No Comments Yet!

You can be first to comment this post!

Leave a Reply