ಪೌರಕಾರ್ಮಿಕರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ: ಸಚಿವ ಸಿ.ಟಿ ರವಿ

ಪೌರಕಾರ್ಮಿಕರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ: ಸಚಿವ ಸಿ.ಟಿ ರವಿ

ಚಿಕ್ಕಮಗಳೂರು ಏ.18

ಲಾಕ್‌ಡೌನ್ ನಡುವೆಯೂ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಈ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ.

ನಗರದ ಕೆ.ಎಂ ರಸ್ತೆಯಲ್ಲಿರುವ  ಚಿಕ್ಕಮಗಳೂರು ಪಟ್ಟಣ ಸಹಕಾರಿ ಬ್ಯಾಂಕ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ೧೮೦ ಪೌರಕಾರ್ಮಿಕರಿಗೆ ಉಚಿತ ದಿನಸಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು ಇಂತಹ ಕಷ್ಟದ ಸನ್ನಿವೇಶದಲ್ಲೂ ಪೌರಕಾರ್ಮಿಕರು ತಮ್ಮ  ದಿನ ನಿತ್ಯದ ಕೆಲಸವನ್ನು  ಆರೋಗ್ಯವನ್ನು ಲೆಕ್ಕಿಸದೆ ಮಾಡುತ್ತಿದ್ದು ಅವರ ಕಾರ್ಯಕ್ಕೆ ಬೆಲೆಕಟ್ಟಲಾಗದು ಎಂದ ಅವರು ಪ್ರತಿಯೊಬ್ಬರಿಗೂ ಲಾಕ್‌ಡೌನ್ ಇದ್ದರೂ ಪೌರಕಾರ್ಮಿಕರು ಮಾತ್ರ ಹಗಲು ರಾತ್ರಿ ಎನ್ನದೇ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಗರದ ಅಂದವನ್ನು ಹೆಚ್ಚಿಸುವ ಮೂಲಕ ಪ್ರತಿ ಕಡೆಗಳಲ್ಲೂ ಸ್ವಚ್ಚತೆಯನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದರು.

Previous ಇನ್ನು ಮೂರು ತಿಂಗಳ ಕಾಲ ಇರಲಿದೆ ಮಹಾಮಾರಿ ಕೊರೋನಾ.
Next ಪ್ರಧಾನಮಂತ್ರಿಗಳ ಸಪ್ತ ಸೂತ್ರಗಳನ್ನು ಪಾಲಿಸಿ: ಸಚಿವ ಸಿ.ಟಿ ರವಿ

You might also like

0 Comments

No Comments Yet!

You can be first to comment this post!

Leave a Reply