ಸರಳ ದಸರಾ ಆಚರಿಸಲು ಅಭಿಪ್ರಾಯ ವ್ಯಕ್ತಪಡಿಸಿದ ಪಾಲಿಕೆ..

ಸರಳ ದಸರಾ ಆಚರಿಸಲು ಅಭಿಪ್ರಾಯ ವ್ಯಕ್ತಪಡಿಸಿದ ಪಾಲಿಕೆ..

ಮೈಸೂರು-

ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬಾರಿಯ ಪಾರಂಪರಿಕ ಹಬ್ಬ ದಸರೆಯನ್ನು ಸರಳವಾಗಿ ಆಚರಿಸುವುದು ಸೂಕ್ತ. ಕೋವಿಡ್‍ಗೆ ಲಸಿಕೆ ಬಂದ ನಂತರ ದಸರ ಹಬ್ಬದಂತೆಯೇ `ಮೈಸೂರ ಹಬ್ಬ’ ಎಂದು ವಿಜೃಂಭಣೆಯಿಂದ ಆಚರಿಸಬಹುದು ಎಂದು ಮೇಯರ್ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸೋಮವಾರ ದಸರಾ ಆಚರಣೆಯ ಸಂಬಂಧ ನಡೆದ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ವಿವಿಧ ಪಕ್ಷಗಳ ನಾಯಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ, ಕೋವಿಡ್ ಸಂಕಷ್ಟದ ಕಾಲದಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಯಿತು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಆಗುವುದಿಲ್ಲ. ದಸರಾ ಆಚರಣೆಯಲ್ಲಿ ಜರುಗುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನರು ಕೂಡ ಆಗಮಿಸಲು ಹಿಂಜರಿಯುತ್ತಾರೆ. ಹಾಗಾಗಿ ದಸರೆಯನ್ನು ಚಾಮುಂಡಿಬೆಟ್ಟದಲ್ಲಿ ಸರಳವಾಗಿ ಉದ್ಘಾಟಿಸಿ, ಅರಮನೆಯ ಆವರಣಕ್ಕೆ ಸೀಮಿತವಾಗುವಂತೆ ಜಂಬೂಸವಾರಿ ನಡೆಸಿ, ಕೋವಿಡ್‍ಗೆ ಲಸಿಕೆ ಬಂದ ನಂತರ ದಸರಾ ಹಬ್ಬದ ರೀತಿಯಲ್ಲಿ ಮೈಸೂರು ಹಬ್ಬ ಎಂದು ಆಚರಿಸಬಹುದು ಎಂಬ ಮಾತುಗಳು ಕೇಳಿಬಂದವು.

ಲಸಿಕೆ ಬಂದ ನಂತರ ಆಚರಿಸುವ ಮೈಸೂರ ಹಬ್ಬದಲ್ಲಿ ದಸರೆಯಲ್ಲಿ ಜರುಗುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೃಂಭಣೆಯಿಂದ ಆಚರಿಸಲು ಕೈಜೋಡಿಸಲಾಗುವುದು. ಆಗಲೂ ಕೂಡ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಹಾಗೂ ಇನ್ನಿತರ ವ್ಯಾಪಾರ ವಹಿವಾಟುಗಳಿಗೂ ಅನುಕೂಲವಾಗುವಂತೆ ಸರ್ಕಾರವು ಬೆಂಬಲಿಸುವಂತೆ ಮನವಿ ಮಾಡಬಹುದು ಎಂದರು.

Previous ಬಳ್ಳಾರಿಯಲ್ಲಿಂದು ಹೊಸದಾಗಿ 346 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆ…!
Next ಬಡವರಿಗೆ ಮನೆಗಳನ್ನು ನೀಡುವುದು ನನ್ನ ಉದ್ದೇಶ.

You might also like

0 Comments

No Comments Yet!

You can be first to comment this post!

Leave a Reply