ಮುಖ್ಯಮಂತ್ರಿಗಳ ದೂರವಾಣಿ ಕರೆಗೆ ಸ್ಪಂದನೆ ಮಹಿಳೆಗೆ ಕ್ಯಾನ್ಸರ್ ಚಿಕಿತ್ಸೆ ಏರ್ಪಾಟು.

ಮುಖ್ಯಮಂತ್ರಿಗಳ ದೂರವಾಣಿ ಕರೆಗೆ ಸ್ಪಂದನೆ ಮಹಿಳೆಗೆ ಕ್ಯಾನ್ಸರ್ ಚಿಕಿತ್ಸೆ ಏರ್ಪಾಟು.

ಧಾರವಾಡ ಏ.12:

ಕೋವಿಡ್ 19 ರ ಲಾಕ್ ಡೌನ್ ಹಿನ್ನೆಲೆಯಲ್ಲಿ ಕ್ಯಾನ್ಸರ್ ಖಾಯಿಲೆಗೆ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದ ಬೆಳಗಾವಿ ಜಿಲ್ಲೆ ಕುಡಚಿಯ 50 ವರ್ಷದ ಮಹಿಳೆಯೊಬ್ಬರ ನೋವಿಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ.

ಕುಡಚಿಯ ಮಹಿಳೆಯ ತೊಂದರೆ ಗಮನಕ್ಕೆ ಬಂದ ತಕ್ಷಣ ಇಂದು ರಾತ್ರಿ 8 ಗಂಟೆಯ ಹೊತ್ತಿಗೆ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿಗಳು , ಮಹಿಳೆಯ ಚಿಕಿತ್ಸೆಗೆ ಏರ್ಪಾಡು ಮಾಡಲು ಸೂಚಿಸಿದರು.

ತಕ್ಷಣ ಕಾರ್ಯಪ್ರವೃತ್ತರಾದ ಡಿ ಎಚ್ ಓ ಅವರು ಹುಬ್ಬಳ್ಳಿ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಸಂಶೋಧನಾ ಕೇಂದ್ರದ ಆಡಳಿತ ಮಂಡಳಿಗೆ ಸಂಪರ್ಕಿಸಿ ನಾಳೆ ಏ.13 ರಂದು ಚಿಕಿತ್ಸೆಗೆ ಸಮಯ ನಿಗದಿಪಡಿಸಿಕೊಟ್ಟಿದ್ದಾರೆ.

Previous ಆಹಾರವಿಲ್ಲ ಎಂದ ಅಲೆಮಾರಿಗಳಿಗೆ ಗಂಟೆಯಲ್ಲಿಯೆ ಆಹಾರ ಪದಾರ್ಥಗಳ ಕಿಟ್ ಪೂರೈಕೆ.
Next ಸಾರ್ವಜನಿಕರಿಂದ ಸಂಗ್ರಹಿಸಿದ ಆಹಾರ ಧಾನ್ಯಗಳ ವಿತರಣೆ.

You might also like

0 Comments

No Comments Yet!

You can be first to comment this post!

Leave a Reply