ಒಳಚರಂಡಿ ಮಿಶ್ರಿತ  ನೀರು ಕುಡಿಯುವ ಬಳ್ಳಾರಿ ಜನತೆ..?

ಒಳಚರಂಡಿ ಮಿಶ್ರಿತ ನೀರು ಕುಡಿಯುವ ಬಳ್ಳಾರಿ ಜನತೆ..?

ಬಳ್ಳಾರಿ-

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಂಡಿಹಟ್ಟಿ ಪ್ರದೇಶದ ರಾಮನಗರದ ನಿವಾಸಿಗಳಿಗೆ ಒಳಚರಂಡಿ ಮಿಶ್ರಿತ ಕುಡಿವ ನೀರು ಪೂರೈಕೆಯಾಗುತ್ತಿದೆ.

ಮಧ್ಯೆರಾತ್ರಿ ಹಾಗೂ ರಾತ್ರೋರಾತ್ರಿ ಈ ಕುಡಿವ ನೀರು ಪೂರೈಕೆ ಮಾಡಲಾಗುತ್ತೆ. ಆದ್ರೆ, ಯಾವಾಗ ಬಂದ್ರೂ ಕೆಂಪು‌ಮಣ್ಣು ಮಿಶ್ರಿತ ನೀರು ಅಥವಾ ಒಳಚರಂಡಿ ದುರ್ವಾಸನೆಯ ನೀರು ಪೂರೈಕೆ ಆಗುತ್ತೆ. ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಯಾರೊ ಬ್ಬರೂ ಕೂಡ ಇತ್ತ ಸುಳಿಯುತ್ತಿಲ್ಲ. ಉಳ್ಳವರು ಈ ನೀರನ್ನ ಶುದ್ಧೀ ಕರಿಸಿ ಕುಡಿಯುತ್ತಾರೆ. ನಾವ್ ಬಡವರು. ನಾವ್ ಬಿಸಿ ಮಾಡಿ ಕುಡಿ ಯುತ್ತೇವೆ. ಎಷ್ಟಂತ ಬಿಸಿ ಮಾಡೋದು. ಮನೆಯಲ್ಲಿ ಸಣ್ಣಸಣ್ಣ ಮಕ್ಕಳಿದ್ದಾರೆ. ಅವರು ನೇರವಾಗಿ ಟಬ್ಬುಗಳಲ್ಲಿ ಸಂಗ್ರಹಿಸಿಟ್ಟ‌‌ ನೀರನ್ನ ಸೇವನೆ ಮಾಡ್ತಾರೆ. ಈ ಕೋವಿಡ್ ಸಂದರ್ಭದಲ್ಲಿ ಶುದ್ಧೀಕರಿಸಿದ ಹಾಗೂ ಕಾಯಿಸಿದ ನೀರು ಕುಡಿಯಬೇಕಂತ ಮಹಾನಗರ ಪಾಲಿಕೆಯೇ ಜಾಗೃತಿ ಮೂಡಿಸುತ್ತಿದೆಯಾದ್ರೂ, ಅದನ್ನ ಪಾಲಿಕೆಯೇ ಪಾಲಿಸುತ್ತಿಲ್ಲ.‌ ಈ ರೀತಿಯ ಒಳಚರಂಡಿ ನೀರು ಮಿಶ್ರಿತ ಹಾಗೂ ಕೆಂಪುಮಣ್ಣಿನ ನೀರು ಪೂರೈಕೆ ಮಾಡಿದ್ರೆ ನಾವೆಲ್ಲ ಹೇಗೆ ಕುಡಿಯೋದು ಅಂತ ರಾಮನಗರದ ನಿವಾಸಿ ಉಮ್ಮೆಜಮ ಪ್ರಶ್ನಿಸಿದ್ದಾರೆ.

Previous ಯೋಗ ತರಬೇತುದಾರರಿಂದ - ಅರ್ಜಿ ಆಹ್ವಾನ
Next ಕಿಚ್ಚ ಸುದೀಪ್ ಹುಟ್ಟುಹಬ್ಬ- ಚಿತ್ರ ಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

You might also like

0 Comments

No Comments Yet!

You can be first to comment this post!

Leave a Reply