ಜಿಲ್ಲಾಡಳಿತಕ್ಕೆ ಕಂಫರ್ಟ್ ಕಿಟ್ ದೇಣಿಗೆ ನೀಡಿದ ಅಜೀಂ ಪ್ರೇಮ್ ಜೀ ಫೌಂಡೇಶನ್.

ಜಿಲ್ಲಾಡಳಿತಕ್ಕೆ ಕಂಫರ್ಟ್ ಕಿಟ್ ದೇಣಿಗೆ ನೀಡಿದ ಅಜೀಂ ಪ್ರೇಮ್ ಜೀ ಫೌಂಡೇಶನ್.

ಬಳ್ಳಾರಿ, ಏ.08

ಕೋವಿಡ್-19 ಹಿನ್ನೆಲೆ ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಪ್ರತಿನಿತ್ಯ ಅವಶ್ಯಕ ಬಳಕೆಗೆ ಬೇಕಾಗಿರುವ ಕಂಫರ್ಟ್ ಕಿಟ್ ಗಳನ್ನು ಒದಗಿಸುವಂತೆ ಬಳ್ಳಾರಿ ಜಿಲ್ಲಾಡಳಿತ ದಾನಿಗಳಲ್ಲಿ ಮನವಿ ಮಾಡಿದಕ್ಕೆ ತಕ್ಷಣ ಸ್ಪಂದಿಸಿರುವ ಅಜೀಂ ಫ್ರೇಮ್ ಜೀ ಫೌಂಡೇಶನ್ 2 ಸಾವಿರ ಕಿಟ್ ನೀಡಲು ಮುಂದೆ ಬಂದಿದ್ದು, ಮೊದಲ ಹಂತದಲ್ಲಿ 500 ಕಂಫರ್ಟ್ ಕಿಟ್ ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ.

ಅಜೀಂ ಪ್ರೇಮ್ ಜೀ ಫೌಂಡೇಶನ್ ನ ಜಿಲ್ಲಾ ಸಮನ್ವಯಾಧಿಕಾರಿ ಉದಯಕುಮಾರ್ ಬೆಕಲ್ ಹಾಗೂ ಫೌಂಡೇಶನ್ ನ ಪ್ರತಿನಿಧಿಗಳು ಜಿಲ್ಲಾಧಿಕಾರಿ ಎಸ್.ಎಸ್‌.ನಕುಲ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರು ಶೀಘ್ರ ಉಳಿದ ಕಂಫರ್ಟ್ ಕಿಟ್ ಗಳನ್ನು ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಕೋವಿಡ್-19 ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಗಳು ನಡೆಸುತ್ತಿರುವ ಹೋರಾಟ ಅಮೋಘವಾದುದು‌. ಬಳ್ಳಾರಿ ಜಿಲ್ಲಾಡಳಿತವು ಈ ವಿಷಯದಲ್ಲಿ ಅತ್ಯಂತ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ, ಅವರು ಈ ಕಾರ್ಯದಲ್ಲಿ ನಾವು ಈ ಮೂಲಕ ಭಾಗಿಗಳಾಗುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು

Previous ಮುಂದಿನ ಎರಡು ವಾರಗಳು ಅತ್ಯಂತ ಜಾಗ್ರತೆಯಿಂದಿರಬೇಕು.
Next ಲಾಕ್ಡೌನ್ ನಿಯಮ ಉಲ್ಲಂಘನೆ :ಜಿಲ್ಲೆಯಲ್ಲಿ 850 ವಾಹನಗಳ ಜಪ್ತಿ, 20 ಜನರ ವಿರುದ್ಧ ಪ್ರಕರಣ ದಾಖಲು.

You might also like

0 Comments

No Comments Yet!

You can be first to comment this post!

Leave a Reply