ಚೀನಾ ನಿರ್ಮಿತ 5 ಲಕ್ಷ  ರಾಪಿಡ್ ಟೆಸ್ಟ್ ಕಿಟ್ಗಳು ಭಾರತಕ್ಕೆ ಆಗಮನ.

ಚೀನಾ ನಿರ್ಮಿತ 5 ಲಕ್ಷ ರಾಪಿಡ್ ಟೆಸ್ಟ್ ಕಿಟ್ಗಳು ಭಾರತಕ್ಕೆ ಆಗಮನ.

ನಹದೆಹಲಿ

ಚೀನಾ ನಿರ್ಮಿತ 5 ಲಕ್ಷ  ರ್ಯಾಪಿಡ್ ಟೆಸ್ಟಿಂಗ್​ ಕಿಟ್​ಗಳು ಭಾರತ ತಲುಪಿದ್ದು, ಇವನ್ನು ಆರಂಭಿಕ ಹಂತದ ರೋಗ ಪತ್ತೆಗಾಗಿ ಬಳಸುವುದಿಲ್ಲ. ದೇಶದಲ್ಲಿ ಕೊರೊನಾ ವೈರಸ್​ ಹಾಟ್​ಸ್ಪಾಟ್​ಗಳು ಹೆಚ್ಚುತ್ತಿವೆಯಾ ಅಥವಾ ಕಡಿಮೆಯಾಗುತ್ತಿವೆಯಾ ಎಂಬುದನ್ನು ತಿಳಿಯಲು ಇವನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 ಚೀನಾದ ಎರಡು ಕಂಪನಿಗಳು ರ್ಯಾಪಿಡ್​ ಟೆಸ್ಟ್ ಕಿಟ್​ಗಳನ್ನು ಪೂರೈಕೆ ಮಾಡಿದ್ದು, ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳ ಪರೀಕ್ಷೆಗೆ ಈ ಕಿಟ್​ಗಳನ್ನು ಬಳಸಲಾಗುವುದು ಎಂದು ಐಸಿಎಂಆರ್​​ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಮಣ ಆರ್​. ಗಂಗಾಖೇಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ

 ಚೀನಾ ಕಳುಹಿಸಿದ ಕಿಟ್​ ದೋಷಪೂರಿತವಾಗಿವೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು,

ಆರೋಪ ಬಂದಿರುವುದು ನಿಜ ಹಾಗೂ  ಚೀನಾ ಕಿಟ್​ಗಳು ಕಡಿಮೆ ಸೂಕ್ಷ್ಮತೆ ಹಾಗೂ ನಿರ್ದಿಷ್ಟತೆ ಹೊಂದಿದ್ದು ನಿಜ. ಆ್ಯಂಟಿಬಾಡಿ ಟೆಸ್ಟ್​ಗಳನ್ನು ಕೇವಲ ಮೇಲ್ವಿಚಾರಣೆ ಹಾಗೂ ಕಣ್ಗಾವಲಿರಿಸಲು ಮಾತ್ರ ಮಾಡಲಾಗುವುದರಿಂದ ಕಿಟ್​ಗಳ ಗುಣಮಟ್ಟದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ ಎಂದರು.

Previous ರಾಜ್ಯಕ್ಕೆ ಬರಲಿವೆ ರಾಪಿಡ್ ಟೆಸ್ಟ್ ಕಿಟ್.
Next ಇನ್ನು ಮೂರು ತಿಂಗಳ ಕಾಲ ಇರಲಿದೆ ಮಹಾಮಾರಿ ಕೊರೋನಾ.

You might also like

0 Comments

No Comments Yet!

You can be first to comment this post!

Leave a Reply