ದಿನಸಿ ಹಾಗೂ ತರಕಾರಿ ಅಂಗಡಿಗಳ ಮಾಹಿತಿಗೊಂದು ಆ್ಯಪ್.

ದಿನಸಿ ಹಾಗೂ ತರಕಾರಿ ಅಂಗಡಿಗಳ ಮಾಹಿತಿಗೊಂದು ಆ್ಯಪ್.

ಹುಬ್ಬಳ್ಳಿ ಮಾ.31:

 ಏಪ್ರಿಲ್ 14ರ ವರೆಗೆ ದೇಶದಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಡೆಹಿಡಿಯಲಾಗಿದೆ. ಈ ಮೂಲಕ ಕೊರೋನ್ ವೈರಸ್ ಹರಡುವುದನ್ನು ತಡೆದು ಜನರ ಆರೋಗ್ಯ ಹಾಗೂ ಪ್ರಾಣ ರಕ್ಷಣೆಗೆ ಸರ್ಕಾರ ಪಣ ತೊಟ್ಟಿದೆ. ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ  ಜನರು ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಬಾರದು.  ದಿನನಿತ್ಯದ ಆಹಾರ ಪದಾರ್ಥಗಳನ್ನು ಕೊಳ್ಳಲು ಪರದಾಡುವಂತಾಗಬಾರದು ಎಂದು ನಾನಾ ಕ್ರಮಗಳನ್ನು ಜಿಲ್ಲಾಡಳಿತ ಹಾಗೂ ಪಾಲಿಕೆ ಕೈಗೊಳ್ಳುತ್ತಿವೆ. ಈ ಪ್ರಯತ್ನದಲ್ಲಿ ತಂತ್ರಜ್ಞಾನವು ಸಹ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಮಹಾನಗರದಲ್ಲಿನ ದಿನಸಿ ಹಾಗೂ ತರಕಾರಿ ಅಂಗಡಿ ಮತ್ತು ಮಾರಾಟಗಾರ ಮಾಹಿತಿಯನ್ನು ಜನರಿಗೆ ನೀಡಲು “ನಮ್ಮ ಹುಬ್ಬಳ್ಳಿ ಧಾರವಾಡ ಅಂಗಡಿಗಳು” ಎಂಬ ಆ್ಯಪ್ ಸಿದ್ದಪಡಿಸಲಾಗಿದೆ. ಸದ್ಯ ಗೂಗಲ್ ಸೇರಿದಂತೆ ಇತರೆ ಸರ್ಚ್ ಇಂಜಿನ್‍ಗಳ ಮೂಲಕ ಕಾರ್ಯಾಚರಣೆ ಅನುವು ಮಾಡಿಕೊಡಲಾಗಿದೆ.  ಟ್ರಿನಿಟಿ ಟಿಕ್ನಾಲಜಿ ಕಂಪನಿಯು ಅಭಿವೃದ್ಧಿ ಪಡಿಸಿರುವ ಈ ಆ್ಯಪ್ ಅನ್ನು ಆಂಡ್ರ್ಯಾಡ್ ಮೊಬೈಲ್‍ಗಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಸರಳವಾಗಿ ಬಳಕೆಗೆ ಬರುವಂತೆ ಆ್ಯಪ್ ಸಿದ್ದಪಡಿಸಲಾಗಿದೆ. ಮುಖ್ಯ ಪೇಜ್‍ನಲ್ಲಿ ವಾರ್ಡ ಸಂಖ್ಯೆ ಆಧರಿಸಿ, ನಾಗರಿಕರು ದಿನಸಿ ಹಾಗೂ ತರಕಾರಿ ಅಗಂಡಿಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಆಯಾ ವಾರ್ಡನಲ್ಲಿ ಬರುವ ದಿನಸಿ ಹಾಗೂ ತರಕಾರಿ ಮಾರಾಟಗಾರರ ಫೋನ್ ಹಾಗೂ ವಾಟ್ಸ್‍ಪ್ ಸಂಖ್ಯೆ ಸುಲಭವಾಗಿ ದೊರಯಲಿದೆ. ನಾಗರಿಕರು ಹೆಚ್ಚಿನ ಮಾಹತಿಗಾಗಿ ವೆಬ್ ಸೈಟ್ ವಿಳಾಸ http://hublishops.ttssl.com  ಸಂಪರ್ಕಿಸಬಹುದು.

Previous ಲಾಕ್ ಡೌನ್ ಆದೇಶ 31ರ ಮದ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 14 ರ ಮದ್ಯರಾತ್ರಿ 12 ಗಂಟೆವರೆಗೆ ಜಾರಿ.
Next ಮಸೀದಿಗಳಲ್ಲಿ ಆಡಿಯೋ ಕ್ಲಿಪ್ ಧ್ವನಿ ವರ್ಧಕ ಮೂಲಕ ಕೋವಿಡ್-19 ಜಾಗೃತಿ.

You might also like

0 Comments

No Comments Yet!

You can be first to comment this post!

Leave a Reply