ಅನಾಥ ಮಕ್ಕಳಿಗೆ ಆಸರೆಯಾದ, ಸಾರಾ ಆಸರೆ.

ಅನಾಥ ಮಕ್ಕಳಿಗೆ ಆಸರೆಯಾದ, ಸಾರಾ ಆಸರೆ.

ಮೈಸೂರು-

 ಅನಾಥ ಮಕ್ಕಳಿಗೆ ಕುಂಟುಂಬವನ್ನು ಒದಗಿಸುವ ಕಾರ್ಯಕ್ರಮ ಇದಾಗಿದೆ. ಬೆಂಗಳೂರಿನ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ  ಸಾರಾ ಆಸರೆ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಮಕ್ಕಳನ್ನು ದತ್ತು ಪಡೆಯುವ ಇಚ್ಛೇವುಳ್ಳವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.

 ದತ್ತು ಪಡೆಯಲು ಇಚ್ಚಿಸುವ ದಂಪತಿಗಳು ಹಾಗೂ ಸಾರ್ವಜನಿಕರಿಗಾಗಿ ದತ್ತು ಪಡೆಯುವ ಕಾರ್ಯಕ್ರಮದ ಪ್ರಕ್ರಿಯೆ ಕುರಿತು ಮಾಹಿತಿ ನೀಡಲು ಸಾರಾ ಆಸರೆ ಎಂಬ ಶೀರ್ಷಿಕೆ  ಅಡಿಯಲ್ಲಿ ರೇಡಿಯೋ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

 ಈ ರೇಡಿಯೋ ಕಾರ್ಯಕ್ರಮವು ಬೆಳಿಗ್ಗೆ 7.15ಕ್ಕೆ, ವಿವಿಧ್ ಭಾರತೀಯಲ್ಲಿ ಬೆಳಿಗ್ಗೆ 8.45ಕ್ಕೆ, ಎಫ್.ಎಂ ರೈನ್‍ಬೋದಲ್ಲಿ ಬೆಳಿಗ್ಗೆ 9.2ಕ್ಕೆ ಸೆಪ್ಟೆಂಬರ್ 17 ಹಾಗೂ ಆಕ್ಟೋಬರ್ 1 ಮತ್ತು 24 ರಂದು ಪ್ರಸಾರವಾಗುತ್ತಿದೆ.  ಸಾರ್ವಜನಿಕರು ಕಾರ್ಯಕ್ರಮವನ್ನು ಆಲಿಸಬಹುದು ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

 ಸಾರಾ ಆಸರೆ  ಕಾರ್ಯಕ್ರಮವು ಕುಟುಂಬದಿಂದ ವಂಚಿತರಾದ ಮಕ್ಕಳಿಗೆ ಕುಂಟುಂಬ  ಮತ್ತು ಮಕ್ಕಳಿಲ್ಲದ ದಂಪತಿಗಳಿಗೆ , ಮಕ್ಕಳನ್ನು ಕಲ್ಪಿಸುತ್ತದೆ. ಇದರಿಂದ ಅನಾಥ ಮಕ್ಕಳಿಗೆ ಒಳ್ಳೆಯ ಕುಂಟುಂಬ, ಶಿಕ್ಷಣ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳ ಜೀವನಕ್ಕೆ ಸಹಕಾರಿಯಾಗಿತ್ತದೆ. ಎಂಬುದು ಮಕ್ಕಳ ರಕ್ಷಣಾ ಇಲಾಖೆ  ಆಶಯವಾಗಿದೆ.

Previous ೫೯ ಮಕ್ಕಳ ರಕ್ಷಣೆ, ೧೦ ವಾಹನಗಳ ಜಪ್ತಿ
Next ಟಾಟಾ ಮೋಟರ್ಸ್ ಗೆ ವರವಾದ ಕರೋನಾ ಸೋಂಕು

You might also like

0 Comments

No Comments Yet!

You can be first to comment this post!

Leave a Reply