ಅಜ್ಜಿಯ ಊರುಗೋಲಿಗೆ ಆಸರೆಯಾದ ಸಚಿವ ಆನಂದಸಿಂಗ್.

ಅಜ್ಜಿಯ ಊರುಗೋಲಿಗೆ ಆಸರೆಯಾದ ಸಚಿವ ಆನಂದಸಿಂಗ್.

ಬಳ್ಳಾರಿ:

 ಅಜ್ಜಿಯ ಊರುಗೋಲಿಗೆ ಆಸರೆಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದಾರೆ. ಜಿಲ್ಲೆಯ ಹೊಸಪೇಟೆ ನಗರದಲ್ಲಿಂದು ಕೋವಿಡ್ – 19 ಸೋಂಕಿನ ಹಿನ್ನಲೆಯಲ್ಲಿ ಬಡ ಮತ್ತು ಕೂಲಿಕಾರ್ಮಿಕರಿಗೆ ಆಹಾರ ದಿನಸಿಗಳನ್ನ ಉಚಿತವಾಗಿ ಹಂಚುವ ಸಂದರ್ಭ ಅಜ್ಜಿಯೊಬ್ಬರು ತನ್ನ ಊರುಗೋಲಿನ ಸಹಾಯದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡೇ ನಿಂತಿದ್ದರು. ಆ ಮಾರ್ಗವಾಗಿ ಬಂದ ಸಚಿವ ಆನಂದಸಿಂಗ್ ಅವರು, ಆ ಅಜ್ಜಿಯ ಊರುಗೋಲಿನ ಕೆಳಭಾಗದ ತುದಿಯನ್ನು ಕೈಯಲ್ಲಿ ಹಿಡಿದುಕೊಂಡೇ ಆಹಾರ ಸಾಮಾಗ್ರಿ ವಿತರಿಸೋ ಜಾಗಕ್ಕೆ ಕರೆ ತಂದ್ರು. ಏನಪ್ಪ ಈಕೆಗೆ ಆಹಾರ ದಿನಸಿ ಕೊಡುತ್ತಿರೊ ಇಲ್ಲವೋ ಅಂತ ಹಂಚಿಕೆದಾರರನ್ನ ಪ್ರಶ್ನಿಸಿ ವಿಶೇಷ ಗಮನ ಸೆಳೆದ್ರು.

ಆಹಾರಾನಂದ ಕಿಟ್ ವಿತರಣೆ: ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು,  ಬಡವರಿಗೆ ಮತ್ತು ಕೂಲಿಕಾರ್ಮಿಕರ ನೆರವಿಗಾಗಿ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಉಚಿತ ಪಡಿತರ ಕಿಟ್ ಗಳನ್ನು ವಿತರಿಸುತ್ತಿದ್ದಾರೆ.

ಕೇಂದ್ರ ಸರ್ಕಾರವು ಮೇ.3 ರವರೆಗೂ ಲಾಕ್ ಡೌನ್ ಆದೇಶ ಹೊರಡಿಸುವುದರ ಜೊತೆಗೆ ಮನೆಯಲ್ಲೇ ಇರುವುದರ ಮೂಲಕ ಸಾರ್ವಜನಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದೆ. ಸಾರ್ವಜನಿಕ ಅಂತರದಿಂದ ರೋಗ ತಡೆಗಟ್ಟಬಹುದಾಗಿದ್ದು ದಿನಗೂಲಿ ನೌಕರರಿಗೆ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೊಸಪೇಟೆ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ‘ಆಹಾರನಂದ’ ಹೆಸರಿನಲ್ಲಿ ಜೋಳ 6 ಕೆ.ಜಿ, ತೊಗರಿಬೇಳೆ 3 ಕೆ.ಜಿ, ಅಡುಗೆ ಎಣ್ಣೆ 2 ಲೀ., ಖಾರದ ಪುಡಿ 400ಗ್ರಾಂ, ಹಾಲಿನ ಪೌಡರ್ 150 ಗ್ರಾಂ, ಅರಿಷಿಣ, ಸಾಸುವೆ ಹಾಗೂ ಜೀರಿಗೆ 100 ಗ್ರಾಂ, ಬೆಳ್ಳುಳ್ಳಿ 500 ಗ್ರಾಂ, ಉಪ್ಪು 1 ಕೆಜಿ ಹೊಂದಿದ ಪಡಿತರ ಕಿಟ್ ಗಳ ವಿತರಣೆ ಆರಂಭಗೊಂಡಿದ್ದು ಶುಕ್ರವಾರದಂದು ಬುಕ್ಕಸಾಗರ, ಗುಂಡ್ಲುವದ್ದೀಗೇರೆ ಗ್ರಾಮಗಳಿಂದ ವಿತರಣೆ ಕಾರ್ಯಾರಂಭ ವಾಗಿದ್ದು ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಒಟ್ಟು 57,717 ಪಡಿತರ ಹೊಂದಿದ ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಲಾಗುತ್ತಿದೆ.

Previous ಒಂದೇ ಕುಟುಂಬದ ಹತ್ತು ಜನರಲ್ಲಿ ಸೋಂಕು.
Next ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ಪ್ರಾರಂಭ.

You might also like

0 Comments

No Comments Yet!

You can be first to comment this post!

Leave a Reply