ಕೃಷಿ ಉತ್ಪನ್ನಗಳ ಮಾರುಕಟ್ಟೆ ಶುಲ್ಕ ನಿಗಧಿ

ಕೃಷಿ ಉತ್ಪನ್ನಗಳ ಮಾರುಕಟ್ಟೆ ಶುಲ್ಕ ನಿಗಧಿ

ಮಡಿಕೇರಿ-

 ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ  ಅಧಿನಿಯಮ 1966ರ ಕಲಂ 65(2) ರ ಮೇರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕವನ್ನು ಮಾರ್ಪಾಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರುಕಟ್ಟೆ ಶುಲ್ಕ ಶೇ.0.35 ಕ್ಕೆ ನಿಗಧಿಪಡಿಸಿ ಮತ್ತು ಒಣದ್ರಾಕ್ಷಿ ಉತ್ಪನ್ನಕ್ಕೆ ಹಾಲಿ ಇರುವ ಶೇ.0.10 ನ್ನು ಮುಂದುವರೆಸಿ ಆದೇಶಿಸಿದೆ.

 ಆದ್ದರಿಂದ ಒಣದ್ರಾಕ್ಷಿ ಉತ್ಪನ್ನಕ್ಕೆ ಹಾಲಿ ಇರುವ ಶೇ.0.10 ನ್ನು ಮುಂದುವರೆಸಿ, ಹೂವು, ಹಣ್ಣು, ಎಲ್ಲಾ ತರಕಾರಿ ಹಾಗೂ ಉಳಿದ ಎಲ್ಲಾ ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಶೇ.0.35 ರಂತೆ ಮಾರುಕಟ್ಟೆ ಶುಲ್ಕವನ್ನು ಆಕರಣೆ ಮಾಡುವ ಸಂಬಂಧ ಪ್ರಸ್ತುತ ಇರುವ ಉಪನಿಯಮಗಳಲ್ಲಿ ತಿದ್ದುಪಡಿ ಮಾಡಿ ಅಳವಡಿಸಿಕೊಳ್ಳಬೇಕಿರುವುದರಿಂದ ಸಮಿತಿಯ ಎಲ್ಲಾ ಪೇಟೆ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಈ ಉಪನಿಯಮಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ, ಸೂಚನೆ ಹಾಗೂ ಆಕ್ಷೇಪಣೆಗಳು ಇದ್ದಲ್ಲಿ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕಾರ್ಯದರ್ಶಿ ಅವರಿಗೆ ಅಕ್ಟೋಬರ್, 09 ರ ಸಂಜೆ 5 ಗಂಟೆಯೊಳಗೆ ಲಿಖಿತವಾಗಿ ಸಲ್ಲಿಸಬೇಕು. ನಂತರ ಬರುವ ಯಾವುದೇ ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರು ತಿಳಿಸಿದ್ದಾರೆ.

Previous ಕೋವಿಡ್-19 ನಿಯಂತ್ರಣ ಮತ್ತು ಮಳೆ ಹಾನಿ ಬಗ್ಗೆ ಮಾಹಿತಿ ಪಡೆದ ಸಿಎಂ
Next ಪ್ರವಾಸಕ್ಕೆ ಹೋಗುತ್ತಿರಾ ಹಾಗಾದರೆ, ಪೂರ್ವಾನುಮತಿ ಕಡ್ಡಾಯ

You might also like

0 Comments

No Comments Yet!

You can be first to comment this post!

Leave a Reply