ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ಸಾರಾಯಿ ನಿರ್ಮೂಲನೆಗೆ ಕ್ರಮ

ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ಸಾರಾಯಿ ನಿರ್ಮೂಲನೆಗೆ ಕ್ರಮ

ಧಾರವಾಡ –

 ಧಾರವಾಡ  ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ಹಾಗೂ ಕಳ್ಳಭಟ್ಟಿ ಸಾರಾಯಿ ಕೇಂದ್ರಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಅಬಕಾರಿ ಹಾಗೂ ಕಳ್ಳಭಟ್ಟಿ ಕಾರ್ಯನಿರತರಿಗೆ ಶಿಕ್ಷಣ, ಉದ್ಯೋಗ ನೀಡಿ ಪುನರ್‍ವಸತಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

 ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಅಬಕಾರಿ ಅಕ್ರಮ ಮತ್ತು ಕಳ್ಳಭಟ್ಟಿ ಸಾರಾಯಿ ಕೇಂದ್ರಗಳ ನಿರ್ಮೂಲನೆಗೆ ರಚಿತವಾಗಿರುವ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಜಿಲ್ಲೆಯಲ್ಲಿ 2007-08 ರಿಂದ ವಿವಿಧ ತಾಲೂಕುಗಳಲ್ಲಿ ಸುಮಾರು 29 ಕಳ್ಳಭಟ್ಟಿ ಸಾರಾಯಿ ಕೇಂದ್ರಗಳಿದ್ದವು, ಅಬಕಾರಿ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ನಿರಂತರ ದಾಳಿ ಹಾಗೂ ಗಸ್ತು, ಪರಿಶೀಲನೆಗಳಿಂದ 27 ಕ್ಕೂ ಹೆಚ್ಚು ಕಳ್ಳಭಟ್ಟಿ ಕೇಂದ್ರಗಳು ಸಂಪೂರ್ಣ ನಿರ್ಮೂಲನೆಯಾಗಿವೆ.

 ಅಣ್ಣಿಗೇರಿ ಮತ್ತು ತಡಸಿನಕೊಪ್ಪದಲ್ಲಿ ಮಾತ್ರ ಕಳ್ಳಭಟ್ಟಿ ಕೇಂದ್ರಗಳು ಕಂಡು ಬರುತ್ತಿದ್ದು, ಅಧಿಕಾರಿಗಳು ನಿರಂತರ ದಾಳಿ, ಗಸ್ತು, ಪರಿಶೀಲನೆ ಮೂಲಕ ನೀಗಾ ಇಟ್ಟಿದ್ದು, ನಿಯಂತ್ರಿಸಿದ್ದಾರೆ ಎಂದು ಅವರು ಹೇಳಿದರು.ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ಕೇಂದ್ರಗಳಿರುವ ಪ್ರದೇಶದಲ್ಲಿನ ಕುಟುಂಬ ವಿವರಗಳನ್ನು ಸಂಗ್ರಹಿಸಿ, ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ವಿವಿಧ ನಿಗಮ, ಮಂಡಳಿಗಳಲ್ಲಿ ಉದ್ಯೋಗ ಹಾಗೂ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿ ಆರ್ಥಿಕ ನೇರವು ನೀಡಿ ಅವರಿಗೆ ಪುನರ್‍ವಸತಿ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

 ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಮಾತನಾಡಿ, ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ನಿರತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ಇಲಾಖೆ ಸೂಕ್ತ ಸಹಕಾರ ನೀಡಿ, ಅಕ್ರಮಗಳನ್ನು ನಿಯಂತ್ರಿಸಲು ಕ್ರಮತೆಗೆದುಕೊಳ್ಳಲಿದೆ ಎಂದು ಹೇಳಿದರು.ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಶಿವನಗೌಡ ಪಾಟೀಲ ಮಾತನಾಡಿ, ಅಬಕಾರಿ ಇಲಾಖೆಯು ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ನಿರ್ಮೂಲನೆಗೆ ನಿರಂತರ ದಾಳಿ, ಆರೊಪಿಗಳ ವಿರುದ್ಧ ಪ್ರಕರಣ ದಾಖಲು, ಕಾರ್ಯಚರಣೆಯಲ್ಲಿ ಸಿಗುವ ಸ್ವತ್ತು ಜಪ್ತಿ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ.ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ನಡೆಸದಂತೆ ಜನಜಾಗೃತಿ ಹಾಗೂ ಕಳ್ಳಭಟ್ಟಿ ದಂದೆ ತೊಡಗಿಕೊಳ್ಳದಂತೆ ಅವರ ಪುನರ್ ವಸತಿಗಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

 ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ 284.42 ಕೋಟಿ ರೂ.ಗಳ ರಾಜಸ್ವ ಸಂಗ್ರಹವಾಗಿದೆ. ಜಿಲ್ಲೆಯಲ್ಲಿ 276 ವಿವಿಧ ಪ್ರಕಾರದ ಮದ್ಯ ಮಾರಾಟ ಸನ್ನದುಗಳಿವೆ ಎಂದು ಅವರು ತಿಳಿಸಿದರು.ಆಗಸ್ಟ್-2019 ರ ತಿಂಗಳಲ್ಲಿ ವಿಚಕ್ಷಣೆಯಲ್ಲಿದ್ದ ಧಾರವಾಡ ತಾಲೂಕಿನಲ್ಲಿ ಜೈ ಭಾರತ ಕಾಲೋನಿ, ಜೋಗೆಲ್ಲಾಪೂರ ಮತ್ತು ಕಲಘಟಗಿ ತಾಲೂಕಿನ ಶಿಗಿಗಟ್ಟಿ ತಾಂಡಾಗಳಲ್ಲಿದ್ದ ಕಳ್ಳಭಟ್ಟಿ ಕೇಂದ್ರಗಳಲ್ಲಿನ ಕಳ್ಳಭಟ್ಟಿ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದ್ದು, ಈಗ ವಿಚಕ್ಷಣ ಪಟ್ಟಿಯಿಂದ ಅವುಗಳನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದರು.

 2018-19 ರಿಂದ 2020-21 ರ ಆಗಸ್ಟ್ ತಿಂಗಳವರೆಗೆ ಅಬಕಾರಿ ಇಲಾಖೆಯಿಂದ ಕಳ್ಳಭಟ್ಟಿ ನಿರ್ಮೂಲನೆಗಾಗಿ  205 ಘೋರ ಪ್ರಕರಣಗಳು, 14 ಕಳ್ಳಭಟ್ಟಿ ಸಂಬಂಧಿತ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 41.200 ಲೀಟರ್ ಕಳ್ಳಭಟ್ಟಿ, 2712 ಲೀಟರ್ ಬೆಲ್ಲದ ಕೊಳೆ ಹಾಗೂ 5 ಕೆಜಿ ಬೆಲ್ಲ ವಶ ಪಡಿಸಿಕೊಂಡು, ನಾಶ ಪಡಿಸಲಾಗಿದೆ. ಆರು  ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಸತತ ಪ್ರಯತ್ನ, ನಿರಂತರ ದಾಳಿ ಹಾಗೂ ಗಸ್ತು ಕಾರ್ಯಗಳಿಂದಾಗಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ 26 ಕಳ್ಳಭಟ್ಟಿ ಕೇಂದ್ರಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ ಎಂದು ಅಬಕಾರಿ ಜಿಲ್ಲಾ ಅಧಿಕಾರಿ ಶಿವನಗೌಡ ಪಾಟೀಲ ಸಭೆಗೆ ತಿಳಿಸಿದರು.

 ಉಪ ಅರಣ್ಯ ಸಂರಕ್ಷಣಾಧಿಕಾರಿ  ಯಶವಂತ ಕ್ಷೀರಸಾಗರ, ಉಪ ಪೆÇಲೀಸ್ ಆಯುಕ್ತರಾದ ಜಿ.ಕೃಷ್ಣಕಾಂತ, ಆರ್.ಬಿ. ಬಸರಗಿ ವೇದಿಕೆಯಲ್ಲಿದ್ದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ., ಡಿವೈಎಸ್‍ಪಿ ರಾಮನಗೌಡ ಹಟ್ಟಿ, ಅಬಕಾರಿ ಅಧೀಕ್ಷಕ ಮಂಜುನಾಥ, ಉಪ ಅಧೀಕ್ಷಕ ಆತ್ಮಲಿಂಗ ಮಠಪತಿ, ಎಲ್ಲ ತಾಲೂಕಿನ ತಹಶೀಲ್ದಾರರು, ಸೇರಿದಂತೆ ಅಬಕಾರಿ, ಪೆÇಲೀಸ್, ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ಪ್ರಾದೇಶಿಕ ಸಾರಿಗೆ, ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ, ನಿಗಮ ಮಂಡಳಿಗಳ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.

Previous ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ತನಿಖಾ ತಂಡದ ಮೇಲೆ ಒತ್ತಡ ಹೇರಿದ ರಾಜಕಾರಣಿ..?
Next ಯಾವುದೇ ಕಾರಣಕ್ಕು ರಾಗಿಣಿ ಅರೆಷ್ಟ್ ಮಾಡಬೇಡಿ ..!

You might also like

0 Comments

No Comments Yet!

You can be first to comment this post!

Leave a Reply