ಬಾಗಲಕೋಟೆ ಸಂಪೂರ್ಣ ಸ್ತಬ್ದ ತುರ್ತು ಸೌಲಭ್ಯಕ್ಕೆ ಕ್ರಮ.

ಬಾಗಲಕೋಟೆ ಸಂಪೂರ್ಣ ಸ್ತಬ್ದ ತುರ್ತು ಸೌಲಭ್ಯಕ್ಕೆ ಕ್ರಮ.

ಬಾಗಲಕೋಟೆ: ಏಪ್ರೀಲ್ 07

 ಜಿಲ್ಲೆಯಲ್ಲಿ ಕೋವಿಡ್ ಸೋಂಕು ದೃಡಪಟ್ಟಿರುವ ಹಿನ್ನಲೆಯಲ್ಲಿ ನಿರ್ಬಂಧಿತ ಪ್ರದೇಶದ ತುರ್ತು ಸೌಲಭ್ಯಕ್ಕೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲೆಗೆ ನೇಮಕಗೊಂಡ ವಿಶೇಷ ಅಪರ ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ ತಿಳಿಸಿದ್ದಾರೆ

ಬಾಗಲಕೋಟೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ಸೋಂಕಿತರ ವಾಸದ ವಾರ್ಡ ನಮ.7 ಮತ್ತು 14 ರಲ್ಲಿ ಈಗಾಗಲೇ ಮತ್ತೆ ಮೂರು ಮಕ್ಕಳಿಗೆ ಸೋಂಕು ದೃಡಪಟ್ಟಿದೆ. ಈ ಹಿನ್ನಲೆಯಲ್ಲಿ ಆ ಪ್ರದೇಶವನ್ನು ಸಂಪೂರ್ಣ ಶೀಲ್ಡ್ ಮಾಡಿ ನಿರ್ಭಂದ ಹೇರಲಾಗಿರುತ್ತದೆ. ನಿರ್ಬಂಧಿತ ಪ್ರದೇಶದಲ್ಲಿ ಯಾರು ಓಡಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ ತುರ್ತು ಸೌಲಭ್ಯಕ್ಕಾಗಿ ಎಲ್ಲ ರೀತಿಯ ಕ್ರಮಕೈಗೊಳ್ಳುವುದಂತೆ ಅಧಿಕಾರಿಗಳಿಗೆ ಸೂಚಿಸಿದರು.

 ನಿರ್ಬಂಧಿತ ಪ್ರದೇಶದಲ್ಲಿರುವ ಕುಟುಂಬಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ನೀರು, ವಿದ್ಯುತ್ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಕಂಟೈನ್‍ಮೆಂಟ್ ಜೋನ್ ಮತ್ತು ಬಫರ್ ಜೋನ್‍ನಿಂದ ಯಾರು ಹೊರಗೆ ಬರದಂತೆ ಅವರವರ ಮನೆ ಬಾಗಿಲಿಗೆ ವೈದ್ಯಕೀಯ ಸೇವೆಯನ್ನು ನೀಡಲು ಕ್ರಮವಹಿಸುವಂತೆ ತಿಳಿಸಿದ್ದಾರೆ.

Previous ಅನಾವಶ್ಯಕವಾಗಿ ದ್ವಿಚಕ್ರ, ನಾಲ್ಕು ಚಕ್ರಗಳ ವಾಹನ ಸಂಚಾರ ನಿಷೇಧ.
Next ಕೊವಿಡ್-19 ಗೆ ರಾಜ್ಯದಲ್ಲಿ ಮೊತ್ತೋದು ಬಲಿ. ಚಿಕಿತ್ಸೆ ಯಲ್ಲಿದ್ದ 80 ವರ್ಷದ ವೃದ್ದೆ ಹೃದಯಾಘಾತದಿಂದ ಸಾವು

You might also like

0 Comments

No Comments Yet!

You can be first to comment this post!

Leave a Reply