ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಒಟ್ಟು 80 ಜನರ ನಿಗಾ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ.

ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಒಟ್ಟು 80 ಜನರ ನಿಗಾ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ.

ಚಾಮರಾಜನಗರ, ಏಪ್ರಿಲ್-06-

 ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಗ್ ಜಮಾತ್ ಸಂಘಟನೆಯು ಹಿಂದಿನ ಕೆಲವು ತಿಂಗಳಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಒಟ್ಟು 80 ಜನರನ್ನು ಗುರುತಿಸಿ ನಗರದ  ಕ್ವಾರಂಟೈನ್‍ಕೇಂದ್ರ ದಲ್ಲಿ  ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಕೋವಿಡ್-19  ಪ್ರಕರಣ ವರದಿಯಾದ ಇತ್ತಿಚಿನ ದಿನಗಳಲ್ಲದೇ ಈ ಹಿಂದಿನ ತಿಂಗಳುಗಳಲ್ಲಿ ನಿಜಾಮುದ್ದೀನ್‍ನಲ್ಲಿ ನಡೆದ ಸಭೆಗಳಲ್ಲಿ ಪಾಲ್ಗೊಂಡಿದ್ದವರ  ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ನಿಜಾಮುದ್ದೀನ್‍ಗೆ ಈ ಕೆಲ ತಿಂಗಳುಗಳ ಹಿಂದೆ ಭೇಟಿ ಕೊಟ್ಟವರನ್ನು ಗುರುತಿಸಿ ನಗರದ ಕ್ವಾರಂಟೈನ್ ಕೇಂದ್ರ ದಲ್ಲಿ ಇರಿಸಲಾಗಿದೆ ಎಂದರು.

Previous ಬೆಂಗಳೂರು 43 ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ದೃಢ.
Next ಕೋವಿಡ್-19 ಮುನ್ನೆಚ್ಚರಿಕೆ- ಆರೋಗ್ಯದ ಹಿತದೃಷ್ಟಿಯಿಂದ ಪ್ರಾರ್ಥನಾ ಸ್ಥಳಗಳ ಭೇಟಿಗೆ ನಿರ್ಬಂಧ.

You might also like

0 Comments

No Comments Yet!

You can be first to comment this post!

Leave a Reply