ಆಹಾರವಿಲ್ಲ ಎಂದ ಅಲೆಮಾರಿಗಳಿಗೆ ಗಂಟೆಯಲ್ಲಿಯೆ ಆಹಾರ ಪದಾರ್ಥಗಳ ಕಿಟ್ ಪೂರೈಕೆ.

ಆಹಾರವಿಲ್ಲ ಎಂದ ಅಲೆಮಾರಿಗಳಿಗೆ ಗಂಟೆಯಲ್ಲಿಯೆ ಆಹಾರ ಪದಾರ್ಥಗಳ ಕಿಟ್ ಪೂರೈಕೆ.

ಕಲಬುರಗಿ,ಏ.12-

 ಕಲಬುರಗಿ ನಗರದ ಕೇಂದ್ರೀಯ ಬಸ್ ನಿಲ್ದಾಣದ ಪಕ್ಕದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಜನಾಂಗದವರು ತಮಗೆ ತಿನ್ನಲು ಆಹಾರವಿಲ್ಲ. ಹೊರಗಡೆ ಹೋದರೆ ಪೊಲೀಸರ ಭಯವಿದ್ದು, ದಯವಿಟ್ಟು ಸಹಾಯಕ್ಕೆ ಬನ್ನಿ ಎಂದು ಅಂಗಲಾಚಿದ್ದೆ ತಡ ತಕ್ಷಣ ಕಾರ್ಯಪ್ರವೃತ್ತರಾದ ಕಲಬುರಗಿ ಜಿಲ್ಲಾಡಳಿತದ ಆಹಾರ ಸಮಿತಿಯ ತಂಡ ಅಲೆಮಾರಿಗಳ ಗುಡಿಸಲಿಗೆ ಹೋಗಿ ಆಹಾರ ಪದಾರ್ಥ ಸಾಮಗ್ರಿಗಳ ಕಿಟ್ ವಿತರಿಸಿ ಅವರ ಹಸಿವನ್ನು ನೀಗಿಸಿದ್ದಾರೆ.

 ಬಸ್ ನಿಲ್ದಾಣದ ಬಳಿ ಕಣ್ಣಿ ಮಾರ್ಕೆಟ್ ಹೊಂದಿಕೊಂಡಂತೆ ಜೋಪಡಿ, ಟೆಂಟ್ ಹಾಕಿಕೊಂಡಿರುವ ಈ ನಿವಾಸಿಗಳು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ಕೈಯಲ್ಲಿ ಕಾಸಿಲ್ಲದೆ ಊಟಕ್ಕೆ ಪರದಾಡುವಂತಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಭಾನುವಾರ ಮಧ್ಯಾಹ್ನ ಅಲ್ಲಿನ ಕುಟುಂಬಗಳು ಬೇಡಿಕೊಂಡರು.

ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರವೀಣ್ ಪ್ರಿಯಾ ಅವರು ಅಧಿಕಾರಿಗಳ ತಂಡವನ್ನು ಕಣ್ಣಿ ಮಾರ್ಕೆಟ್ ಪ್ರದೇಶಕ್ಕೆ ಕಳುಹಿಸಿ ವಿವರ ಪಡೆದು, ಸಾಯಂಕಾಲ 5 ಗಂಟೆಯೊಳಗಾಗಿ ಆಹಾರ ಸಮಿತಿಯ ಸದಸ್ಯರಾದ ಆಹಾರ ಸುರಕ್ಷತಾ ಅಧಿಕಾರಿ ಡಾ.ದೀಪಕ್ ಸುಖೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಹಾಗೂ ನಿರಾಶ್ರಿತ ಪರಿಹಾರ ಕೇಂದ್ರದ ಮುಖ್ಯಸ್ಥ ಸಂಗಮನಾಥ ಮೋದಿ ಅವರ ಸಮಕ್ಷಮ ಕಣ್ಣಿ ಮಾರ್ಕೆಟ್ ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಎಲ್ಲಾ 31 ಕುಟುಂಬಗಳಿಗೆ ಅಡುಗೆಗೆ ಬೇಕಾಗಿರುವ ಅಕ್ಕಿ, ಗೋದಿ ಹಿಟ್ಟು, ಅಡುಗೆ ಎಣ್ಣೆ, ಖಾರದ ಪುಡಿ, ಉಪ್ಪು ಹೀಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ಪ್ರತ್ಯೇಕವಾಗಿ ವಿತರಿಸಿದರು. ಜಿಲ್ಲಾಡಳಿತದ ಆಹಾರ ಸಮಿತಿಯ ತ್ವರಿತ ಸ್ಪಂದನೆಗೆ ಅಲೆಮಾರಿ ನಿವಾಸಿಗಳ ಸಂತೋಷಪಟ್ಟರು.

Previous ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಘೋಷಿಸಿ ಆದೇಶ.
Next ಮುಖ್ಯಮಂತ್ರಿಗಳ ದೂರವಾಣಿ ಕರೆಗೆ ಸ್ಪಂದನೆ ಮಹಿಳೆಗೆ ಕ್ಯಾನ್ಸರ್ ಚಿಕಿತ್ಸೆ ಏರ್ಪಾಟು.

You might also like

0 Comments

No Comments Yet!

You can be first to comment this post!

Leave a Reply