ದೇಶದ ಸೈನಿಕರ ರಕ್ಷಣೆಗೆ ತಯಾರಾಯಿತು ಅತ್ಯಾದುನಿಕ ಆಂಬ್ಯುಲೆನ್ಸ್.

ದೇಶದ ಸೈನಿಕರ ರಕ್ಷಣೆಗೆ ತಯಾರಾಯಿತು ಅತ್ಯಾದುನಿಕ ಆಂಬ್ಯುಲೆನ್ಸ್.

ಹುಬ್ಬಳ್ಳಿ- ಏ-23: ಕಾಶ್ಮೀರ ಸೇರಿದಂತೆ ಗಡಿಯಲ್ಲಿ ಇರುವ ನಮ್ಮ ಸೈನಿಕರು ಗಾಯಗೊಂಡ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಮ್ಮ ದೇಶದ ಯೋಧರಿಗೆ ಅನುಕೂಲವಾಗಲೆಂದು ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಆರ್ಯಭಟ ಟೆಕ್‌ಪಾರ್ಕ್​ನ ಏಬಲ್ ಡಿಸೈನ್ ಎಂಜಿನಿಯರಿಂಗ್ ಪ್ರೈ. ಲಿ. ಹಾಗೂ ಸ್ಪೈರಾ ಟೆಕ್ನೋವೇಶನ್ ಕಂಪನಿ ಈ‌ ಆಂಬ್ಯುಲೆನ್ಸ್​ಗಳನ್ನ ಸಿದ್ಧಪಡಿಸಿವೆ. ಎಲ್ಲ ತುರ್ತು ವಾಹನಗಳಿಗಿಂತ ಈ ತುರ್ತು ವಾಹನ ವಿಭಿನ್ನವಾಗಿದ್ದು, ಎಂತಹ ಸವಾಲಿನ ರಸ್ತೆಯಲ್ಲೂ ಸಹ ಇವು ಯೋಧರ ಬಳಿ ಹೋಗಿ ಚಿಕಿತ್ಸೆ ನೀಡುತ್ತವೆ. ಟಾಟಾ ಸುಮೋ ವಾಹನ ಮತ್ತು ಸ್ವರಾಜ್ ಮಾಜ್ದಾ ವಾಹನಗಳನ್ನ ವಿಭಿನ್ನವಾಗಿ ಸಿದ್ಧಪಡಿಸಿ, ಯೋಧರಿಗೆ ತಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ರೆಡಿ ಮಾಡಲಾಗಿದೆ.


 ಟಾಟಾ ಸುಮೋ ಒಳಗಡೆ ಪ್ರವೇಶಿಸುತ್ತಿದಂತೆ ಗಾಯಗೊಂಡ ಯೋಧರಿಗೆ ಬೇಕಾದ ಆಕ್ಸಿಜನ್, ವೆಂಟಿಲೇಟರ್, ಎಸಿ ಮತ್ತು ಹೀಟರ್​ಗಳನ್ನ ಸಹ ಇಲ್ಲಿ ಅಳವಡಿಸಲಾಗಿದೆ. ಉತ್ತಮ ಗುಣಮಟ್ಟದ 35 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳು ಇದರಲ್ಲಿವೆ. ಆಧುನಿಕ‌ ಪ್ರಾಥಮಿಕ ಚಿಕಿತ್ಸೆ, ಅಗತ್ಯ ಔಷಧಗಳನ್ನ ಸಂಗ್ರಹಿಸಿಕೊಳ್ಳಲು ವ್ಯವಸ್ಥೆ, ಆಟೋ‌ ಲೋಡಿಂಗ್ ಸ್ಟ್ರೆಚರ್, ವೈದ್ಯರು ಹಾಗೂ ಅಗತ್ಯ ಸಲಕರಣೆ ಇಟ್ಟುಕೊಳ್ಳಲು‌ ಜಾಗದ ವ್ಯವಸ್ಥೆ ಇದೆ.


ಈ ವಾಹನ ಮೊಬೈಲ್ ಆಂಬ್ಯುಲೆನ್ಸ್ ಆಗಿಯೂ ‌ಕಾರ್ಯನಿರ್ವಹಿಸಲಿದೆ. ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರನ್ನ ಆಂಬ್ಯುಲೆನ್ಸ್ ಮೂಲಕ‌ ಸಂಪರ್ಕಿಸಿ, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಆಡಿಯೋ ಹಾಗೂ ವಿಡಿಯೋ ಸೌಲಭ್ಯ ಇದೆ.
ಕಳೆದ ಡಿಸೆಂಬರ್​ನಲ್ಲಿ ಡಿಆರ್​ಡಿ‌ಒ ಅಡಿಯಲ್ಲಿ ಡಿಇಬಿಎಲ್ ವಾಹನ ಸಿದ್ಧಪಡಿಸಲು ಟೆಂಡರ್ ನೀಡಲಾಗಿತ್ತು. ಡಿಆರ್​ಡಿಒ ಆದೇಶದಂತೆ ವಾಹನ ತಯಾರಿಸಲಾಗಿದೆ. ಹಿಮಾಲಯದಂತಹ ಹವಾಮಾನಕ್ಕೆ ತಕ್ಕಂತೆ ಅಲ್ಲಿ ಸಂಭವಿಸುವ ಭೂ ಕುಸಿತ, ವಿಪರೀತ ಮಳೆ, ಹಿಮ ಬೀಳುವುದಕ್ಕೆ ಒಗ್ಗುವಂತೆ ಈ ವಾಹನ ಸಿದ್ಧಪಡಿಸಲಾಗಿದೆ ಎಂದು ಡಿಸೈನ್ ಇಂಜಿನಿಯರಿಂಗ್ ಮುಖ್ಯಸ್ಥ ಜಗದೀಶ್ ಹಿರೇಮಠ ತಿಳೀಸಿದ್ದಾರೆ.

Previous ಟಾಟಾ ವಾಹನ ಮಾಲೀಕರಿಗೆ ಸಿಹಿ ಸುದ್ಧಿ.
Next ಸಿದ್ದವಾಯಿತೆ ಕೊರೋನಾ ವೈರಸ್ ಲಸಿಕೆ..?

You might also like

0 Comments

No Comments Yet!

You can be first to comment this post!

Leave a Reply