ಬಾಲಕನ ಪ್ರಾಣಕ್ಕೆ ಮುಳ್ಳಾಯಿತು ಪಬ್ ಜೀ ಗೇಮ್

ಬಾಲಕನ ಪ್ರಾಣಕ್ಕೆ ಮುಳ್ಳಾಯಿತು ಪಬ್ ಜೀ ಗೇಮ್

ಹುಬ್ಬಳ್ಳಿ-

ಕೇಂದ್ರ ಮೋದಿ ಸರ್ಕಾರ ಚೀನಾ ಆ್ಯಪ್ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಪಬ್‌ ಜಿ ಗೇಮ್‌ ಬ್ಯಾನ್ ಆಗಿದ್ದರೂ ಕೂಡ ಪಬ್ ಜಿ ಆಟ ಬಾಲಕನನ್ನು ಬಲಿ ತೆಗೆದುಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ ಪಬ್ ಜಿ ಆಟವಾಡಲು ಮೊಬೈಲ್ ಗೆ ಇಂಟರ್ನೆಟ್ ಹಾಕಿಸದೇ ಇರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಹಾವೇರಿ ಜಿಲ್ಲೆಯ ಸಂಗೂರ ಗ್ರಾಮದ ತೇಜಸ್ ಸಿಡ್ಲಾಪುರ (17) ಗೇಮ್ ಗೆ ಬಲಿಯಾದ ಬಾಲಕ. ಅಗಷ್ಟ 31 ರಂದು ವಿಷ ಸೇವಿಸಿದ್ದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೊಬೈಲ್‌ನಲ್ಲಿ ಇಂಟರ್ನೆಟ್ ಖಾಲಿ ಆಗಿತ್ತು. ಕಾರಣ ತಂದೆಯ ಬಳಿ ಮಗ ಇಂಟರ್ ನೆಟ್ ಹಾಕಿಸಲು ಹಣ ಕೇಳಿದ್ದಾನೆ. ಆಗ ತಂದೆ ಮಗನಿಗೆ ಗದರಿದ್ದಾನೆ. ಹೀಗಾಗಿ ಮಗ ಖಾಲಿ ಆಗಿದ್ದ ಇಂಟರ್ನೆಟ್ ಹಾಕಿಸದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous ನೂರಾರು ಎಕರೆ ಅರಣ್ಯ ಭೂಮಿಯಲಿ ರೈತರ ಉಳುಮೆ; ರೈತರ ಒಕ್ಕಲೆಬ್ಬಿಸಿರೋದನ್ನ ತಡೆಯಲು ಮುಂದಾದ ಸಂಸದ
Next ಶ್ರೀಗಂಧ ಅಕ್ರಮ ಕಳ್ಳ ಸಾಗಣೆ ಆರೋಪ: ಮೂವರ ಬಂಧನ

You might also like

0 Comments

No Comments Yet!

You can be first to comment this post!

Leave a Reply