ಎಂದೇಕು ಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ

ಎಂದೇಕು ಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ

ಬಿಹಾರ್- ಏ-9

 ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಂಬಂಧಬಾಹುಗಳನ್ನು ವಿಸ್ತರಿಸುತ್ತಿದೆ. ಎಲ್ಲಡ್ಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ವೈರಸ್‌ ಹರಡುವಿಕೆ ತಡೆಯಲು ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಬಿಹಾರದಲ್ಲಿ ಒಂದೇ ಕುಟುಂಬದ ಒಂಬತ್ತು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅಲ್ಲಿನ ಜನರ ಆತಂಕ ಹೆಚ್ಚಿಸಿದೆ. ಅಲ್ಲದೇ ಮಾರಕ ವೈರಾಣು ರಾಜ್ಯದಲ್ಲಿ ಓರ್ವ ವ್ಯಕ್ತಿಯನ್ನು ಬಲಿ ಪಡೆದಿದೆ. ಬಿಹಾರದಲ್ಲಿ ಈವರೆಗೆ 51 ಕೋವಿಡ್​-19 ಪ್ರಕರಣಗಳು ಕಂಡು ಬಂದಿದ್ದು, ಇಂದು ಹೊಸದಾಗಿ 12 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಸಿವಾನ್​​ದಲ್ಲಿ ಅತೀ ಹೆಚ್ಚು ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಜನರು ಹೆಚ್ಚಾಗಿ ಗಲ್ಫ್​ ದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ವಾಪಸ್ಸು ಬಂದವರಿಂದ ಸೋಂಕು ಹರಡಿರುವ ಸಾಧ್ಯತೆಯನ್ನು ಆರೋಗ್ಯ ಸಚಿವರ ಕಾರ್ಯದರ್ಶಿ ಸಂಜಯ್​ ಕುಮಾರ್​ ತಿಳಿಸಿದ್ದಾರೆ. ಬಿಹಾರದ ಈವೆರಗೂ  11 ಜಿಲ್ಲೆಗಳಲ್ಲಿ ಕೋವಿಡ್​-19 ಕಾಣಿಸಿಕೊಂಡಿದ್ದು, ಸಿವಾನ್​ದಲ್ಲಿ 20 ಮಂದಿ, ಪಾಟ್ನಾ 5, ಮಂಗೂರ್​​ 7, ನಲಂದಾ 2,ಗಯಾ 5,ಗೋಪಾಲ್​ಗಂಜ್​​​ 3 ಕೇಸ್​ ಕಾಣಿಸಿಕೊಂಡಿವೆ. ಇನ್ನು ಏಪ್ರಿಲ್ 14 ರ ಬಳಿಕ ಈ ರಾಜ್ಯದಲ್ಲಿ ಇನ್ನು 14 ದಿನಗಳ ಕಾಲ್ ಲಾಕ್ ಡೌನ್ ಮಾಡಲು ಸರ್ಕಾರ ಚಿಂತನೆಯಲ್ಲಿ ಇದೆ. 11 ರಂದು ಪ್ರದಾನಿ ಮೋದಿ ಜೊತೆಯಲ್ಲಿ ಚರ್ಚೆ ನೆಡೆಸಿ ಈ ನಿರ್ಧಾರ ಪ್ರಕಟಿಸಲಿದೆ ಅಲ್ಲಿನ ಸರ್ಕಾರ.

Previous ನಿಜ ಜೀವನದ ಹೀರೊಗಳಾಗಿರುವ ಇವರಿಗೆ ನನ್ನ ಹೋಟೆಲ್ ಬಾಗಿಲು ಸದಾ ತೆರೆದಿರುತ್ತದೆ. ತನ್ನ ಹೋಟೆಲ್ಬಿಟ್ಟು ಕೊಟ್ಟ ಸೋನು ಸೂದ್.
Next ಜಿಲ್ಲಾಡಳಿತ ಕಚೇರಿಯ ಕಿಟಕಿಗಳಲ್ಲಿ ಕುಳಿತು ಆಹಾರಕ್ಕಾಗಿ ಹಪಹಪಿಸಿದ ವಾನರ ಸೈನ್ಯ.

You might also like

0 Comments

No Comments Yet!

You can be first to comment this post!

Leave a Reply