10 ವರ್ಷ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆಸ್ಪತ್ರೆಯಲ್ಲಿ ಸಾವು

10 ವರ್ಷ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆಸ್ಪತ್ರೆಯಲ್ಲಿ ಸಾವು

ಬಳ್ಳಾರಿ ನಗರದ ಕೇಂದ್ರ ಕಾರಾಗೃಹದಲ್ಲಿ ಜೈಲಯ ಶಿಕ್ಷೆ ಅನುಭವಿಸುತಿದ್ದ ಕೈದಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ. 

ಬಳ್ಳಾರಿ ತಾಲೂಕಿನ ಗೌರಿಹಳ್ಳಿಯ ನಿವಾಸಿಯಾದ ಹನುಮಂತಪ್ಪ (64) ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ ಕೈದಿಯಾಗಿದ್ದಾನೆ . ಕಳೆದ ಹಲವಾರು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಹೀಗಾಗಿ ಬಳ್ಳಾರಿ ನಗರದ ವಿಮ್ಸ್​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾನೆ ಎಂದು ಕೌಲ್ ಬಜಾರ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಈತ 10 ವರ್ಷದ ಹಿಂದಿನ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ, ಈಗಾಗಲೇ  ಕಳೆದ ೮ ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾನೆ. ಬೆಳಗಿನ ಜಾವ ಲಘುವಾಗಿ ಹೃದಯಾಘಾತ ಆಗಿದ್ದಯ ಜೈಲು ಸಿಬ್ಬಂದಿ ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿ ಆಗದೆ ಕೈದಿ ಸಾವಿಗೀಡಾಗಿದ್ದಾನೆ ..

Previous *ಕೊರೇನ ವೈರಸ್ ಗೆ ಸದ್ಯದಲ್ಲೇ ಔಷಧಿ ಆವಿಷ್ಕಾರ*
Next ಈ ಬಾರಿ ಹೆಚ್ಚಳವಾಗಲಿದೆಯೇ ಬಳ್ಳಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ?

You might also like

0 Comments

No Comments Yet!

You can be first to comment this post!

Leave a Reply