೫೯ ಮಕ್ಕಳ ರಕ್ಷಣೆ, ೧೦ ವಾಹನಗಳ ಜಪ್ತಿ

೫೯ ಮಕ್ಕಳ ರಕ್ಷಣೆ, ೧೦ ವಾಹನಗಳ ಜಪ್ತಿ

ರಾಯಚೂರು-

 ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಿರವಾರ ಕ್ರಾಸ್, ಕೊಪ್ಪರ ಕ್ರಾಸ್, ನಗರಗುಂಡ ಕ್ರಾಸ್ ಮತ್ತು ಜಾಲಹಳ್ಳಿ ಕ್ರಾಸ್‌ನಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಹಠಾತ್ ದಾಳಿ ಮಾಡಿ ಕೃಷಿ ಚಟುವಟಿಕೆಗಳಿಗಾಗಿ ಮಕ್ಕಳನ್ನು ಕಾನೂನು ಬಾಹಿರವಾಗಿ ಗೂಡ್ಸ್ ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ ೧೦ ವಾಹನಗಳನ್ನು ಜಪ್ತಿ ಮಾಡಿ, ೫೯ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

 ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲು, ಮಕ್ಕಳ ರಕ್ಷಣಾ ಅಧಿಕಾರಿಗಳ ಮುಖಾಂತರ ಹಸ್ತಾಂತರಿಸಲಾಯಿತು. ಮಕ್ಕಳು ದೇವದುರ್ಗ ತಾಲೂಕಿನ ಹೊಸೂರು, ಸಿದ್ದಾಪುರ, ಜಾಲಹಳ್ಳಿ, ಭೂಮನಗುಂಡ, ಗಲಗ, ಬೆಂಚಮರಡಿ, ಕೆ.ಇರಬಗೇರಾ, ಮುಂಡರಗಿ, ಮತ್ತು ದೇವದುರ್ಗ ಪಟ್ಟಣದವರಾಗಿರುತ್ತಾರೆ.

 ದಾಳಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ್ ಪವಾರ್, ಶಿವಶಂಕರ್ ಬಿ. ತಳವಾರ್, ನಾಗರತ್ನ , ವಿಶ್ವನಾಥ, ರೇವಣ್ಣ ಸಿದ್ದಪ್ಪ, ಸುರೇಶ, ಅಶೋಕ, ಪಾರ್ವತಿ, ತಿಕ್ಕಯ್ಯ, ತಾಯರಾಜ್, ಮಹೇಶ, ಕೆ.ದೇವರಾಜ್ , ದೇವರಾಜ್, ರವಿಕುಮಾರ ಇದ್ದರು.

 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೧೬ ರಂತೆ ೧೪ ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ದುಡಿಸಿಕೊಂಡಲ್ಲಿ ೫೦,೦೦೦ ರೂಗಳ ದಂಡ ಹಾಗೂ ೨ ವರ್ಷ ಜೈಲು ಶಿಕ್ಷೆ ಇರುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಶಿಕ್ಷಾರ್ಹ ಅಪರಾದವಾಗಿರುತ್ತದೆ, ಕಾರಣ ಮಕ್ಕಳನ್ನು ದುಡಿಸಿಕೊಳ್ಳಬಾರದು. ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Previous ವಾಯುಪಡೆಯ ನೇಮಕಾತಿ ರ್ಯಾಲಿ
Next ಅನಾಥ ಮಕ್ಕಳಿಗೆ ಆಸರೆಯಾದ, ಸಾರಾ ಆಸರೆ.

You might also like

0 Comments

No Comments Yet!

You can be first to comment this post!

Leave a Reply