ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ಪ್ರಾರಂಭ.

ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ಪ್ರಾರಂಭ.

ಚಿತ್ರದುರ್ಗ, ಏ.1

 ಕೋವಿಡ್-19 ತಡೆಗೆ ದೇಶದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಜನರು ಮನೆಯಲ್ಲಿಯೇ ಇರುವ ಸನ್ನಿವೇಶ ನಿರ್ಮಾಣವಾಗಿದೆ. ತಮ್ಮ ಅಗತ್ಯ ವಸ್ತುಗಳ ಖರೀದಿಗಾಗಿ ಜನರಿಗೆ ನಗದು ಹಣದ ಅವಶ್ಯಕತೆ ಇದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಕರ್ನಾಟಕ ಗ್ರಾಮೀಣ ಬ್ಯಾಂಕ್) ಗ್ರಾಹಕರ ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ನೀಡಲು ಮುಂದಾಗಿದೆ.

ಮೊಬೈಲ್ ಎಟಿಎಂ ವಾಹನ ಚಿತ್ರದುರ್ಗ ನಗರದ ಎಲ್ಲಾ ವಾರ್ಡ್ ಹಾಗೂ ಬಡಾವಣೆಗಳಲ್ಲಿ ಸಂಚರಿಸಲಿದೆ. ಗ್ರಾಹಕರ ಮನೆ ಬಾಗಿಲಿಗೆ ಬರುವ ಎಟಿಎಂ ವಾಹನದ ಸೌಲಭ್ಯವನ್ನು ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್ ಬಳಸಿ ತಮ್ಮ ಖಾತೆಯಲ್ಲಿನ ಹಣವನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದಾಗಿದೆ. ಎಟಿಎಂ ವಾಹನವು ಬೆಳಿಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ನಗರದ ವಿವಿಧೆಡೆ ಸಂಚಾರ ನಡೆಸಲಿದೆ.

ಸಂಚಾರಿ ಎಟಿಎಂ ಸೇವೆಯಿಂದಾಗಿ ಹೆಚ್ಚು ಜನರು ಸೇರುವುದನ್ನು ತಪ್ಪಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಾಯಕವಾಗಿದೆ.

Previous ಅಜ್ಜಿಯ ಊರುಗೋಲಿಗೆ ಆಸರೆಯಾದ ಸಚಿವ ಆನಂದಸಿಂಗ್.
Next ಜಿಲ್ಲೆಯಲ್ಲಿ 10 ನ್ಯಾಯಬೆಲೆ ಅಂಗಡಿಗಳ ಅಮಾನತ್ತು.

You might also like

0 Comments

No Comments Yet!

You can be first to comment this post!

Leave a Reply