ಮಂಗಳೂರು‌ ಗಲಭೆಯಲ್ಲಿ ಆಗಿದ್ದೇನು?
Comments 0 87 Views

ಮಂಗಳೂರು‌ ಗಲಭೆಯಲ್ಲಿ ಆಗಿದ್ದೇನು?

ಮಂಗಳೂರು:ಮಂಗಳೂರಿನ ಗಲಭೆ,ಗೊಲೀಬಾರ್ ಘಟನೆಗೂ ಕೇರಳಕ್ಕೂ ಡೈರೆಕ್ಟ್ ಲಿಂಕ್ ಇದೆಯಾ ಅನ್ನೋ ಅನುಮಾನ ಕೇಳಿಬಂದಿತ್ತು. ಕೆಲವರಂತೂ,ಈ ಘಟನೆ ಹಿಂದೆ ಕೇರಳದ ಜೆಹಾದಿಗಳು ಭಾಗಿಯಾಗಿದ್ದಾರೆ, ಇದು ಪೂರ್ವ ನಿಯೋಜಿತ ಕೃತ್ಯ ಅಂತಲೇ ಆರೋಪಿಸಿದ್ದರು. ಇದೀಗ ಹಿಂಸಾಚಾರ ಘಟನೆಯ ಬೆನ್ನು ಬಿದ್ದಿರುವ ಪೊಲೀಸರು ಕೃತ್ಯದಲ್ಲಿ ಕೇರಳದ ಲಿಂಕ್ ಇರುವುದನ್ನು ಪತ್ತೆ ಮಾಡಲು ಹೊಸ ಉಪಾಯ ಹೂಡಿದ್ದಾರೆ.  ಕಳೆದ ಡಿಸೆಂಬರ್ 19ರಂದು ನಡೆದ ಮಂಗಳೂರಿನ ಹಿಂಸಾಚಾರ ಮತ್ತು ಗೋಲಿಬಾರ್ ಘಟನೆಯಾಗಿ ತಿಂಗಳು ತುಂಬಿದೆ.ಹಿಂಸಾಚಾರ ಕೃತ್ಯದಲ್ಲಿ ಭಾಗಿಯಾದವರ ಪತ್ತೆಗೆ ಪೊಲೀಸರು ವಿಡಿಯೋ ಫೂಟೇಜ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ, ವಿಡಿಯೋದಲ್ಲಿ ಸಾವಿರಾರು ಮಂದಿ ಇರುವುದರಿಂದ ಅವರನ್ನು ಪತ್ತೆ ಮಾಡುವುದು ಸುಲಭದ ಕಾರ್ಯವಲ್ಲ. ಹೀಗಾಗಿ ಅಂದು ಘಟನೆ ನಡೆದ ಬಂದರು ಠಾಣೆ ಪರಿಸರಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಮಂದಿಯನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ.

ಮೊಬೈಲ್ ಟವರ್ ಲೊಕೇಶನ್ ಆಧರಿಸಿ, ಹೊರಜಿಲ್ಲೆ ಮತ್ತು ಕೇರಳ ಮೂಲದ ನಿವಾಸಿಗಳನ್ನು ಪಟ್ಟಿ ಮಾಡಿದ್ದು ಸಾವಿರಕ್ಕೂ ಹೆಚ್ಚು ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಹಿಂಸಾಚಾರ ಘಟನೆಯ ಬಳಿಕ ಬಂದರು ಠಾಣೆಯಲ್ಲಿ ದೊಂಬಿ, ಪೊಲೀಸರ ಕೊಲೆಯತ್ನ , ಗಲಭೆ, ಕಲ್ಲು ತೂರಾಟ ಸೇರಿ ಗಂಭೀರ ಅಪರಾಧ ಕೃತ್ಯಗಳ ಬಗ್ಗೆ ವಿವಿಧ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು. ಇದೇ ಆಧಾರದಲ್ಲಿ ಆವತ್ತು ಬಂದರು ಠಾಣೆ ವ್ಯಾಪ್ತಿಗೆ ಆಗಮಿಸಿದ್ದ ಪ್ರಮುಖವಾಗಿ ಕೇರಳದ ನಿವಾಸಿಗಳಿಗೆ ಈಗ ನೋಟಿಸ್ ಜಾರಿಯಾಗಿದೆ. ನಿಗದಿಗೊಳಿಸಿದ ದಿನಾಂಕಗಳಂದು ನೋಟಿಸ್ ಪಡೆದವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಿದೆ. ಪೊಲೀಸರ ಈ ಕ್ರಮದಿಂದಾಗಿ ಸಾವಿರಾರು ಮಂದಿ ಈಗ ಪೊಲೀಸರ ತನಿಖೆ ಎದುರಿಸುವಂತಾಗಿದೆ. ಪೌರತ್ವ ಮಸೂದೆ ವಿರೋಧಿಸಿ

ಮಂಗಳೂರು‌ ಗಲಭೆಯಲ್ಲಿ ಆಗಿದ್ದೇನು?
 ಡಿ.19ರಂದು ಸೆಕ್ಷನ್ ಉಲ್ಲಂಘಿಸಿ, ಪ್ರತಿಭಟನೆಗೆ ಯತ್ನಿಸಲಾಗಿತ್ತು. ಮುಸ್ಲಿಂ ಯುವಕರು ಗುಂಪು ಸೇರಿ ಪೊಲೀಸರ ಸೂಚನೆ ಲೆಕ್ಕಿಸದೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಬಳಿಕ ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ, ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಟಿಯರ್ ಗ್ಯಾಸ್ ಮೂಲಕ ಚದುರಿಸಲು ಯತ್ನಿಸಿದ್ದರು. ಘಟನೆ ಬಳಿಕ ಸಿಸಿಟಿವಿ ಮತ್ತು ಮೊಬೈಲ್, ಕ್ಯಾಮರಾ ವಿಡಿಯೋಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣ ಸಂಬಂಧಿಸಿ ಈವರೆಗೆ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಕೃತ್ಯದಲ್ಲಿ ಕೇರಳದ ನಿವಾಸಿಗಳು ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ, ಈವರೆಗೆ ಬಂಧಿತರಲ್ಲಿ ಕೇರಳದ ಮಂದಿ ಯಾರೂ ಇಲ್ಲ. ಹೀಗಾಗಿ ತಪ್ಪಿಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಬಿಲ ತೋಡುವ ಕೆಲಸ ಮಾಡಿದ್ದಾರೆ.

ಪೊಲೀಸರ ಈ ಕ್ರಮದಿಂದಾಗಿ ಅಮಾಯಕರಿಗೂ ನೋಟೀಸ್ ಜಾರಿಯಾಗುವಂತಾಗಿದ್ದು ವಿನಾ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದ ಬಡ ಮಹಿಳೆಯರಿಗೂ ನೋಟಿಸ್ ಜಾರಿಯಾಗಿದ್ದು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಗಂಭೀರ ಅಪರಾಧ ಆಗಿರುವ ಹಿನ್ನೆಲೆಯಲ್ಲಿ ನೋಟಿಸ್ ಪಡೆದವರು ತಾವು ಆಗಮಿಸಿದ್ದ ಬಗ್ಗೆ ಸೂಕ್ತ ಕಾರಣಗಳನ್ನು ಪೊಲೀಸರಿಗೆ ನೀಡಬೇಕಾಗಿದೆ.

ವಿಚಾರಣೆ ವೇಳೆ ಸಂಶಯಾಸ್ಪದ ಕಂಡುಬಂದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಗಡಿಜಿಲ್ಲೆ ಕಾಸರಗೋಡಿನ ಮಂಜೇಶ್ವರ, ಉಪ್ಪಳ, ಕುಂಬ್ಳೆ ಪರಿಸರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಮಂಗಳೂರಿನ ಹಿಂಸಾಚಾರ ಘಟನೆಯ ನೈಜ ಆರೋಪಿಗಳು ತಲೆಮರೆಸಿಕೊಂಡಿದ್ದರೆ, ಈಗ ಅಮಾಯಕರು ತಾವು ಮಾಡದ ತಪ್ಪಿಗೆ ಪರಿತಪಿಸುವಂತಾಗಿದೆ.

Previous ಬಲಿಗಾಗಿ ಬಾಯಿತೆರೆದಿರುವ ಹತ್ತಾರು ಕೊಳವೆ ಬಾವಿಗಳು
Next ಟಿಕೆಟ್‌‌ಗಾಗಿ ಹತ್ತು ಕೋಟಿ ಡಿಮ್ಯಾಂಡ್ - ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

You might also like

ದಾನಿಗಳು ನೇರವಾಗಿ ಅತ್ಯವಶ್ಯಕ ವಸ್ತುಗಳನ್ನು ಒದಗಿಸುವುದು ನಿರ್ಬಂಧ.

ರಾಯಚೂರು,ಏ.೦೩. ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ದೇಶವ್ಯಾಪ್ತಿ ಲಾಕ್‌ಡೌನ್ ಜಾರಿಯಲ್ಲಿದ್ದು, ವಿವಿಧ ರೀತಿಯ ಅವಶ್ಯಕ ವಸ್ತುಗಳನ್ನು ಎನ್.ಜಿ.ಒ ಗಳು, ಸಾಮಾಜಿಕ ಸೇವಕರು, ದಾನಿಗಳು ಕೊಡಲು ಇಚ್ಚಿಸಿದ್ದಲ್ಲಿ ನೇರವಾಗಿ ತಾವೇ ಜನರಿಗೆ ವಸ್ತುಗಳನ್ನು ಹಂಚುವದನ್ನು ನಿರ್ಬಂಧಿಸಲಾಗಿದೆ. ತಾಲೂಕು ಆಡಳಿತದೊಂದಿಗೆ ಸಂಪರ್ಕಿಸಿ ಸೇವೆಯನ್ನು

ಗ್ರಾಮೀಣ ಪ್ರದೇಶಗಳಲ್ಲಿ ತಾಜಾ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ.

ಚಾಮರಾಜನಗರ, ಏಪ್ರಿಲ್ 03  ಕೊರೊನಾ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ  ದಿಗ್ಭಂಧನಕ್ಕೊಳಗಾಗಿದ್ದು. ಚಾಮರಾಜನಗರ ಜಿಲ್ಲೆಯಲ್ಲಿಯೂ ಸಹ ಲಾಕ್‍ಡೌನ್ ಜಾರಿಗೊಳಿಸಿರುವರಿಂದ ಸಾರ್ವಜನಿಕರಿಗೆ ದಿನಬಳಕೆಯ ಅಗತ್ಯ ವಸ್ತುಗಳ ಕೊರತೆ ಕಾಡಿತ್ತು. ಇದರಿಂದ ನಗರಗಳಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಹಿನ್ನಲೆಯಲ್ಲಿ

ಖಾಸಗಿ ವೈದ್ಯಕೀಯ ಸೇವೆ; ಪಾಸ್ ನೀಡಲು ನಿರ್ದೇಶನ.

ಬೆಳಗಾವಿ, ಏ.೪ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾಮಾನ್ಯ ವೈದ್ಯಕೀಯ ಸೇವೆಗೆ ಮುಂದಾಗುವ ಖಾಸಗಿ ವೈದ್ಯರು ಮತ್ತು ಕ್ಲಿನಿಕ್ ಗಳಿಗೆ ಪಾಸ್ ಸೇರಿಂದತೆ ಅಗತ್ಯ ನೆರವು ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರಾದ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ ಬೆಳಗಾವಿಯಲ್ಲಿ ನಡೆದ

0 Comments

No Comments Yet!

You can be first to comment this post!

Leave a Reply