ಭಾರತೀಯ ವಾಯುಸೇನೆಯ ಅಪಾಚೆ ಯುದ್ಧ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ.

ಭಾರತೀಯ ವಾಯುಸೇನೆಯ ಅಪಾಚೆ ಯುದ್ಧ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ.

ನವದೆಹಲಿ-ಏ-17

ಭಾರತೀಯ ವಾಯುಸೇನೆಯ ಅಪಾಚೆ ಯುದ್ಧ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಪಂಜಾಬ್​ನ ಹೊಶಿಯಾರ್‌ಪುರ್‌ನಲ್ಲಿ ನಡೆದಿದೆ. ನಿಯಂತ್ರಣ ಕೊಠಡಿಯಿಂದ ಎಚ್ಚರಿಕೆ ಬಂದ ಕೂಡಲೇ ಕೃಷಿ ಜಮೀನಿನಲ್ಲಿ ಹೆಲಿಕಾಪ್ಟರ್​ಅನ್ನು ಲ್ಯಾಂಡಿಂಗ್​ ಮಾಡಲಾಗಿದೆ. ಪೈಲಟ್‌ ಸುರಕ್ಷಿತವಾಗಿದ್ದಾರೆ ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ.

ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ಪಠಾಣ್‌ಕೋಟ್‌ ಏರ್‌ ಬೇಸ್‌ನಿಂದ ಹಾರಾಟ ಆರಂಭಿಸಿತ್ತು. ಸ್ಥಳಕ್ಕಾಗಿಮಿಸಿದ ವಾಯುಸೇನಾ ಸಿಬ್ಬಂದಿ ಪರಿಶೀಲನೆ ನಡೆಸಿದ ಬಳಿಕ ಹೆಲಿಕಾಪ್ಟರ್‌ ವಾಪಸ್‌ ತರಲಾಗಿದೆ.

ನಿನ್ನೆಯಷ್ಟೇ ದೆಹಲಿಯಿಂದ ಚಂಡೀಘಡಕ್ಕೆ ತೆರಳುತ್ತಿದ್ದ ವಾಯುಸೇನೆಯ ಚೇತಕ್ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಉತ್ತರ ಪ್ರದೇಶದ ಭಾಗ್‌ಪೇಟ್‌ನ ಎಕ್ಸ್‌ಪ್ರೆಸ್‌ ಹೈವೇನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಲೇಹ್​ನಿಂದ ಬಂದಿದ್ದ ವೈದ್ಯಕೀಯ ಕೋವಿಡ್‌-19 ಸ್ಯಾಂಪಲ್​ಗಳನ್ನು ದೆಹಲಿಯ ಹಿಂಡನ್​ ವಾಯುನೆಲೆಯಿಂದ ಚಂಡೀಘಡಕ್ಕೆ ಸಾಗಿಸುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.

Previous ಕಲಬುರಗಿ ಜಿಮ್ಸ್ ಕೋವಿಡ್-19 ಆಸ್ಪತ್ರೆಯಾಗಿ ಕಾರ್ಯನಿರ್ವಹಣೆ: 10 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ.
Next ರಾಜ್ಯಕ್ಕೆ ಬರಲಿವೆ ರಾಪಿಡ್ ಟೆಸ್ಟ್ ಕಿಟ್.

You might also like

0 Comments

No Comments Yet!

You can be first to comment this post!

Leave a Reply