ಬಸ್ನಲ್ಲಿ ಸೋಂಕಿತ ವ್ಯಕ್ತಿ ಸಂಚಾರ. ಪ್ರಯಾಣಿಕರು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.

ಬಸ್ನಲ್ಲಿ ಸೋಂಕಿತ ವ್ಯಕ್ತಿ ಸಂಚಾರ. ಪ್ರಯಾಣಿಕರು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.

ಬಾಗಲಕೋಟೆ: ಏಪ್ರೀಲ್ 13

 ಜಿಲ್ಲೆಯಲ್ಲಿ ಕೋವಿಡ್ ವೈರಸ್ ಸೋಂಕಿತರೊಂದಿಗಿನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹಾಗೂ ಅವರ ಪ್ರವಾಸದ ತನಿಖೆಯನ್ನು ನಡೆಸಲಾಗುತ್ತಿದ್ದು, ಜಿಲ್ಲೆಯ ಓರ್ವ ಸೋಂಕಿತ ವ್ಯಕ್ತಿ (ಪಿ-162)ಯುವ ಮಾರ್ಚ 16 ರಂದು ಸಂಜೆ 4 ಗಂಟೆಗೆ ಕಲಬುರಗಿಯಿಂದ ವಿಜಯಪುರಕ್ಕೆ ಕೆಎ-32 ಎಫ್-2284 ಬಸ್‍ನಲ್ಲಿ ಸಂಚರಿಸಿದ್ದಾರೆ. ಅಲ್ಲದೇ ಅದೇ ದಿನ ರಾತ್ರಿ 8.30ಕ್ಕೆ ವಿಜಯಪುರದಿಂದ ಹುಬ್ಬಳ್ಳಿ  ಮಾರ್ಗದ ಬೀಳಗಿ ಘಟಕದ ಕೆಎ-29 ಎಫ್-1531 ಬಸ್‍ನಲ್ಲಿ ಪ್ರಯಾಣಿಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಕಾರಣ ಈ ಎರಡು ಬಸ್‍ಗಳಲ್ಲಿ ಸಂಚರಿಸಿದ ಸಾರ್ವಜನಿಕರು ಸಮೀಪದ ತಾಲೂಕಾ ಆರೋಗ್ಯ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

Previous ಸಾರ್ವಜನಿಕರಿಂದ ಸಂಗ್ರಹಿಸಿದ ಆಹಾರ ಧಾನ್ಯಗಳ ವಿತರಣೆ.
Next ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ ಕ್ವಾರೆಂಟೈನ್ ಕೇಂದ್ರದಿಂದ 101 ಜನರ ಬಿಡುಗಡೆ.

You might also like

0 Comments

No Comments Yet!

You can be first to comment this post!

Leave a Reply