ಬಲಿಗಾಗಿ ಬಾಯಿತೆರೆದಿರುವ ಹತ್ತಾರು ಕೊಳವೆ ಬಾವಿಗಳು

ಬಲಿಗಾಗಿ ಬಾಯಿತೆರೆದಿರುವ ಹತ್ತಾರು ಕೊಳವೆ ಬಾವಿಗಳು

*ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ* 
ಜನವರಿ -೧೮:
ರಾಜ್ಯ ಸಕಾ೯ರವನ್ನು ನಿದ್ದೆಗೆಡಿಸಿದ್ದ ತೆರೆದ ಕೊಳವೆ ಬಾವಿ ಅವಘಡಗಳು ಮರುಕಳಿಸುವ ಎಲ್ಲಾ  ಲಕ್ಷಣಗಳು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದಲ್ಲಿ ನಿಮಾ೯ಣವಾಗಿದೆ. ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಬೋರ್ ವೆಲ್ ಗಳನ್ನು  ಕೊರೆಸಲಾಗಿದೆ. ಅವುಗಳಲ್ಲಿ ಹತ್ತಾರು ಬೋರ್ ವೆಲ್ ಗಳು ಅನುಪಯುಕ್ತ ಕೊಳವೆ ಬಾವಿಗಳಾಗಿ ನಿಮಾ೯ಣವಾಗಿದ್ದು. ಅವುಗಳನ್ನು ಸುರಕ್ಷಿತವಾಗಿ ಮುಚ್ಚದೇ ಹಾಗೇ ಬಿಡಲಾಗಿದೆ.

ಜವಾಬ್ದಾರಿ ನಿವ೯ಹಿಾಬೇಕಾಗಿರುವ ಸ್ಥಳೀಯ ಆಡಳಿತದ ನಿಲ೯ಕ್ಷ್ಯದಿಂದಾಗಿ ಅವು ಬಲಿಗಾಗಿ ಬಾಯಿತರೆದು ಕುಂತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೊಳವೆ ಬಾವಿ ಪ್ರಕರಣ ಜರುಗಿದ ಮೇಲೆ ಸಕಾ೯ರ ಹಾಗೂ ನ್ಯಾಯಾಲಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ತೆರೆದ ಕೊಳವೆಬಾವಿಗಳನ್ನು ಮುಚ್ಚಲು ಸ್ಥಳೀಯ ಆಡಳಿತಕ್ಕೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿ ಕ್ರಮಕ್ಕಾಗಿ  ಸೂಚಿಸಲಾಗಿದೆ. ಆದ್ರೆ ಇಲ್ಲಿಯ ಸ್ಥಳೀಯ ಆಡಳಿತ ಮೇಲಾಧಿಕಾರಿಗಳ ಆದೇಶಕ್ಕೆ ಬಿಡಿಗಾಸಿನ ಕಿಮ್ಮತ್ತು ನೀಡಿಲ್ಲ. ಹತ್ತಾರು ಕೊಳವೆ ಬಾವಿಗಳು ಬಲಿಗಾಗಿ ಬಾಯಿತೆರೆದು ಕುಳಿತಿವೆ.

ಗ್ರಾಮದ ಸಕಾ೯ರಿ ಶಾಲಾ ಆವರಣಕ್ಕೆ ಹೊಂದಿಕೊಂಡಂತೆ ಇರುವ ಅನುಪಯುಕ್ತ ತೆರದ ಕೊಳವೆ ಬಾವಿಯೊಂದು ಬಾಯ್ತೆರೆದು ಕುಳಿತಿದ್ದು, ಅದು ಶಾಲಾ ಮಕ್ಕಳನ್ನು ಯಾವ ಸಂದಭ೯ದಲ್ಲಿ ಬಲಿತೆಗೆದು ಕೊಳ್ಳುತವೆಯೋ ಎಂಬ  ಭಯದ ವಾತಾವರಣ ನಿಮಾ೯ಣವಾಗಿದೆ ಎಂದು ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆತಂಕ ವ್ಯೆಕ್ತಪಡಿಸಿದ್ದಾರೆ.

ತೆರೆದ ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿಸುವ ಕ್ರಮಗಳನ್ನು ಜರುಗಿಸದೇ ಇರುವ ಸ್ಥಳೀಯ ಆಡಳಿತಾಧಿಕಾರಿ ನಿಲ೯ಕ್ಷ್ಯದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶವ್ಯೆಕ್ತ ಪಡಿಸಿದ್ದಾರೆ…

Previous ಕರೋಡ್ ಪತಿ ಆಗಲು ಹೋಗಿ ವಂಚನೆಗೊಳಗಾದ..!
Next ಮಂಗಳೂರು‌ ಗಲಭೆಯಲ್ಲಿ ಆಗಿದ್ದೇನು?

You might also like

0 Comments

No Comments Yet!

You can be first to comment this post!

Leave a Reply