ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೆ ಇದ್ದು ಇಲ್ಲವಾದ ಪಶು ಪಾಲಿ ಕ್ಲಿನಿಕ್

ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೆ ಇದ್ದು ಇಲ್ಲವಾದ ಪಶು ಪಾಲಿ ಕ್ಲಿನಿಕ್

ಬೀದರ್ :  ಮಾನ್ಯ ಪಶು ಸಚಿವರು ಈ ಸ್ಟೋರಿಯನ್ನು ನೋಡಲೆಬೇಕು… ಹೌದು  2014ರಲ್ಲಿ ಬಿಜೆಪಿ ಸರ್ಕಾರ ಈ ಪಶು ಪಾಲಿ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ಘೋಷಣೆ ಮಾಡಿ,ಕೋಟ್ಯಂತರ ಅನುದಾನ ಕೂಡಾ ಬಿಡುಗಡೆ ಮಾಡಿತ್ತು… ಆದ್ರೆ ಗಡಿ ಜಿಲ್ಲೆ ಸ್ವತಃ ಪಶು ಸಂಗೋಪನಾ ಸಚಿವರ ಸ್ವಕ್ಷೇತ್ರವಾದ್ರು ಪಶು ಪಾಲಿ ಕ್ಲಿನಿಕ್ ಗೆ ಇನ್ನು ಉದ್ಘಾಟನೆ ಭಾಗ್ಯ ಸಿಕ್ಕಿಲ್ಲಾ ಸ್ವಾಮಿ… ಗ್ರಾಮೀಣ ಪ್ರದೇಶದ ಪಶುಗಳಿಗೆ ಉನ್ನತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಸರ್ಕಾರ ೧.೮೪ ಲಕ್ಷ ಅನುದಾನದಲ್ಲಿ “ಪಶು ಪಾಲಿ ಕ್ಲಿನಿಕ್”ಗಳನ್ನು ಆರಂಭಿಸಿತ್ತು…

ಈ  ಪಶು ಪಾಲಿ ಕ್ಲಿನಿಕ್ 6 ತಿಂಗಳುಗಳಾದ್ರು ಇನ್ನು ಉದ್ಘಾಟನೆ ಮಾಡದೆ‌ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ… ತಜ್ಞ ವೈದ್ಯರ, ಯಂತ್ರೋಪಕರಣಗಳ ಹಾಗೂ ಮೂಲಭೂತ ಸೌಕರ್ಯದ ಕೊರತೆ ಸೇರಿದಂತ್ತೆ ಹಲವಾರು ಕಾರಣಗಳಿಂದ ಉದ್ಘಾಟನೆ ಭಾಗ್ಯಕ್ಕೆ ತೊಡಕಾಗಿದೆ… ಜಿಲ್ಲೆ‌ಅಷ್ಟೇ ಅಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಪಾಲಿ ಕ್ಲಿನಿಕ್ ಇನ್ನು ಉದ್ಘಾಟನೆ ಭಾಗ್ಯ ಕಂಡಿಲ್ಲಾ ಎನ್ನುವುದೆ ಶೋಚನಿ ಸಂಗತಿಯಾಗಿದೆ…

ಇನ್ನು ಈ ಪಾಲಿ ಕ್ಲಿನಿಕ್ ನಲ್ಲಿ ಹೈಟೆಕ್ ಲ್ಯಾಬ್, ಪಶು ರಕ್ತ ಪರಿಶೀಲನೆ,ಶ್ರಸ್ತಚಿಕಿತ್ಸೆ ಸೇರಿದಂತ್ತೆ ಹಲವಾರು ರೀತಿ ಹೈಟೆಕ್ ಚಿಕಿತ್ಸೆಯನ್ನು ಜಾನುವಾರಗಳಿಗೆ ನೀಡಬಹುದು… ಆದ್ರೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷದಿಂದಾಗಿ ಇಂದು ಕೋಟ್ಯಾಂತರ ಅನುದಾನದಲ್ಲಿ ನಿರ್ಮಾಣವಾದ ಪಾಲಿ ಕ್ಲಿನಿಕ್ ಮಾತ್ರ ಹಾಳುಕೊಂಪೆಯಾಗಿದೆ… ಪಶು ಸಂಗೋಪನಾ ಸಚಿವರು‌ ಕೂಡಾ ಬೀದರ್ ಜಿಲ್ಲೆಯವರೆ ಆಗಿದ್ದು ಇಗಲಾದ್ರು ಸಚಿವರು ಉದ್ಘಾಟನೆ ಮಾಡುತ್ತಾರಾ ಎಂದು ರೈತರು‌ ಜಾತಕ ಪಕ್ಷಿಯಂತ್ತೆ ಕಾಯಿತ್ತಿದ್ದಾರೆ…

Previous ನೀರಿಲ್ಲದೆ ಒಣಗುತ್ತಿದೆ ಹೈಟೆಕ್ ಉದ್ಯಾನವನ !
Next ಕರೋಡ್ ಪತಿ ಆಗಲು ಹೋಗಿ ವಂಚನೆಗೊಳಗಾದ..!

You might also like

0 Comments

No Comments Yet!

You can be first to comment this post!

Leave a Reply