ನಿಜ ಜೀವನದ ಹೀರೊಗಳಾಗಿರುವ ಇವರಿಗೆ ನನ್ನ ಹೋಟೆಲ್ ಬಾಗಿಲು ಸದಾ ತೆರೆದಿರುತ್ತದೆ. ತನ್ನ ಹೋಟೆಲ್ಬಿಟ್ಟು ಕೊಟ್ಟ ಸೋನು ಸೂದ್.

ನಿಜ ಜೀವನದ ಹೀರೊಗಳಾಗಿರುವ ಇವರಿಗೆ ನನ್ನ ಹೋಟೆಲ್ ಬಾಗಿಲು ಸದಾ ತೆರೆದಿರುತ್ತದೆ. ತನ್ನ ಹೋಟೆಲ್ಬಿಟ್ಟು ಕೊಟ್ಟ ಸೋನು ಸೂದ್.

ಮುಂಬೈ ಏ-9

 ಕೊರೋನಾ ಮಹಾಮಾರಿ ವಿರುದ್ಧ ಸರ್ಕಾರದ ಹೋರಾಟದಲ್ಲಿ ಎಲ್ಲರು ಕೈ ಜೋಡಿಸಿದ್ದಾರೆ.ಹೌದು ಇದಕ್ಕೆ ಬಾಲಿವುಡ್ ನಟರು ಸಹ ಹೊರತಲ್ಲಾ. ಬಹು ಬಾಷಾ ನಟ ಸೋನು ಸೂದ್ ಸಹ ತಮ್ಮ ಹೋಟೆಲ್ ಹೋಂ ಕ್ವಾರೆಂಟೈನ್ ಮಾಡಲು ಬಿಟ್ಟು ಕೊಟ್ಟಿದ್ದಾರೆ. ನಟ ಶಾರುಖ್‌ ಖಾನ್ ಹಾಗೂ ಪತ್ನಿ ಗೌರಿ ತಮ್ಮ ನಾಲ್ಕಂತಸ್ತಿನ ಕಚೇರಿಯನ್ನೂ ಕೋವಿಡ್​ ರೋಗಿಗಳ ಚಿಕಿತ್ಸೆಗಾಗಿ ಬಿಟ್ಟು ಕೊಡುವುದಾಗಿ ಇತ್ತೀಚೆಗೆ ಹೇಳಿದ್ದರು.    

 ಈಗ ಸೋನು ಸೂದ್ ಕೋವಿಡ್​-19 ಹೋರಾಟದಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್ ಹಾಗೂ ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಮುಂಬೈ ಮಹಾನಗರದಲ್ಲಿರುವ ತನ್ನ ಒಡೆತನದ ಹೋಟೆಲ್​ ಬಿಟ್ಟುಕೊಡಲು ಬಾಲಿವುಡ್​ ನಟ ಸೋನು ಸೂದ್ ಮುಂದಾಗಿದ್ದಾರೆ.

“ಕೋವಿಡ್​-19 ಚಿಕಿತ್ಸೆಯಲ್ಲಿ ನಿರತರಾಗಿರುವ ದೇಶದ ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿರುವ ವೈದ್ಯರು, ನರ್ಸ್​ ಹಾಗೂ ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಕೈಲಾದ ಸಹಾಯ ಮಾಡುವುದು ತನ್ನ ಪಾಲಿಗೆ ಹೆಮ್ಮೆಯ ವಿಷಯ. ನಿಜ ಜೀವನದ ಹೀರೊಗಳಾಗಿರುವ ಇವರಿಗೆ ನನ್ನ ಹೋಟೆಲ್ ಬಾಗಿಲು ಸದಾ ತೆರೆದಿರುತ್ತದೆ.” ಎಂದು ಸೋನು ಸೂದ್ ಹೇಳಿದ್ದಾರೆ.

.

Previous ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು .
Next ಎಂದೇಕು ಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ

You might also like

0 Comments

No Comments Yet!

You can be first to comment this post!

Leave a Reply