ದೆಹಲಿಗೆ ಪ್ರಯಾಣ ಮಾಡಿ ಬಂದವರ ಮಾಹಿತಿ ನೀಡಲು ಸೂಚನೆ.

ದೆಹಲಿಗೆ ಪ್ರಯಾಣ ಮಾಡಿ ಬಂದವರ ಮಾಹಿತಿ ನೀಡಲು ಸೂಚನೆ.

ಬೀದರ, ಮಾರ್ಚ್ 31

 ದೇಶ ಹಾಗೂ ರಾಜ್ಯ ಮತ್ತು ಜಿಲ್ಲೆಯಾದ್ಯಂತ ಕೊರೋನಾ ವೈರಸ್ ಸೋಂಕು  ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೆಹಲಿಗೆ ಪ್ರಯಾಣ ಮಾಡಿ ಬಂದವ ಮಾಹಿತಿ ಸಂಗ್ರಹಿಸಲಾಗುತ್ತಿದೆ. 

ಆದ್ದರಿಂದ ದಿನಾಂಕ 10/03/2020 ರಿಂದ ದಿನಾಂಕ 20/03/2020 ರವರೆಗೆ ಬೀದರ ಜಿಲ್ಲೆಯ ಸುಮಾರು ಜನರು ದೆಹಲಿಯ ನಿಜಾಮೋದ್ದಿನ್ ಮರಖಸ್ ದರ್ಗಾಕ್ಕೆ ಭೇಟಿ ನೀಡಿರುವ ಬಗ್ಗೆ ಮಾಹಿತಿ ವರದಿಯಾಗಿದೆ. ಅಲ್ಲದೇ ಇನ್ನು ಕೆಲ ಜನರು ಈ ಸಮಯದಲ್ಲಿ ದೆಹಲಿಗೆ ಪ್ರಯಾಣ ಮಾಡಿ ಬೀದರಗೆ ಹಿಂತಿರುಗಿ ಬಂದಿರುವುದಾಗಿ ತಿಳಿದುಬಂದಿರುತ್ತದೆ. ಆದ್ದರಿಂದ ದೆಹಲಿಗೆ ಪ್ರಯಾಣ ಮಾಡಿರುವ ವ್ಯಕ್ತಿಗಳು ಜಿಲ್ಲಾ ಸರ್ವೇಕ್ಷಣಾ ಘಟಕದ ಸಹಾಯವಾಣಿ ಕೇಂದ್ರ ಸಂಖ್ಯೆ 08482-224141 ಕರೆ ಮಾಡಿ ಮಾಹಿತಿ ನೀಡುವಂತೆ ಈ ಮೂಲಕ ತಿಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳೀಸಿದ್ದಾರೆ.

Previous ಲಂಚ ಪಡೆದ ಸಾರಿಗೆ ಅಧಿಕಾರಿಗಳ ಅಮಾನತು.
Next ಗ್ರಾಮೀಣ ಪ್ರದೇಶಗಳಲ್ಲಿ ತಾಜಾ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ.

You might also like

0 Comments

No Comments Yet!

You can be first to comment this post!

Leave a Reply