ಕೃಷಿ ಕಾಲೇಜು ಮೇಲ್ದರ್ಜೇಗೆ ಶೀಘ್ರ ಕ್ರಮ – ಸಚಿವ ಆನದಸಿಂಗ್

ಕೃಷಿ ಕಾಲೇಜು ಮೇಲ್ದರ್ಜೇಗೆ ಶೀಘ್ರ ಕ್ರಮ – ಸಚಿವ ಆನದಸಿಂಗ್

ಬಳ್ಳಾರಿ-

 ಬಳ್ಳಾರಿ ಜಿಲ್ಲೆಯಲ್ಲಿರುವ ಹಗರಿ ಕೃಷಿ ಕಾಲೇಜನ್ನು ಮೇಲ್ದರ್ಜೇಗೇರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಮತ್ತು ಪ್ರತಿ 3 ತಿಂಗಳಿಗೊಮ್ಮೆ ಕೆಕೆಆರ್‍ಡಿಬಿ ಅನುದಾನ ಹಂಚಿಕೆ, ಪ್ರಗತಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಅರಣ್ಯ, ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.

 ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಸಂಬಂಧಿಸಿದಂತೆ ಅನುದಾನ ಕೇಳುವುದಕ್ಕೆ, ವಿವಿಧ ಕೇಂದ್ರ ಸಚಿವಾಲಯಗಳಲ್ಲಿರುವ ಕೆಲಸಗಳಿಗೆ ಸಂಬಂಧಿಸಿದಂತೆ ಸಚಿವರನ್ನು ಭೇಟಿಯಾಗಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನವದೆಹಲಿಗೆ ತೆರಳುತ್ತಿದ್ದಾರೆ. ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿಂಗ್ ಅವರು ವಿಸ್ತರಣೆ ಆದರೇ ಆಗಲಿ; ಅದೇ ಉದ್ದೇಶಕ್ಕೆ ಸಿಎಂ ಅವರು ನವದೆಹಲಿಗೆ ಹೋಗ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಈಗ ನನಗೆ ವಹಿಸಲಾದ ಅರಣ್ಯ ಖಾತೆಯಲ್ಲಿ ನನಗೆ ತೃಪ್ತಿಯಿದೆ ಎಂದರು.

Previous ಅಪಾಯದ ಅಂಚಿನಲ್ಲಿ ನಾರಿಹಳ್ಳ ಡ್ಯಾಮ್?
Next ಕೊರೋನಾ ಸೋಂಕಿನಿಂದ ರಾಜ್ಯಸಭಾ ಸಂಸದ ಅಶೋಕ್​ ಗಸ್ತಿ ನಿಧನ

You might also like

0 Comments

No Comments Yet!

You can be first to comment this post!

Leave a Reply