ಕರೋನಾ ಭೀತಿ ಕುಸಿದ  ಮೆಣಸಿನಕಾಯಿ ದರ ಕುಸಿತ
Comments 0 68 Views

ಕರೋನಾ ಭೀತಿ ಕುಸಿದ ಮೆಣಸಿನಕಾಯಿ ದರ ಕುಸಿತ

ಮೆಣಸಿಕಾಯಿ ಬೆಳೆದ  ಬಳ್ಳಾರಿ ರೈತ ಕಂಗಾಲು

ಚೀನಾದಲ್ಲಿ ಕರೋನಾ ವೈರಸ್ ರೋಗ ಇದೀಗ ಭಾರತದಲ್ಲೂ ಅಲ್ಲಲ್ಲಿ ಕಾಣ ಸಿಗುತ್ತದೆ. ಇದು ಒಂದು ಕಡೆ ಅತಂಕದ ವಿಷಯವಾದ್ರೇ, ಇದೀಗ ಚೀನಾದ ಕರೋನಾ ವೈರಸ್ ಎಫೆಕ್ಟ್ ಬಳ್ಳಾರಿ ರೈತರಿಗೆ ತಟ್ಟಿದೆ. ಬಳ್ಳಾರಿ ಮತ್ತು ಹಾವೇರಿ ಭಾಗದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಯ ನ್ನು ಬೆಳೆಯಲಾಗುತ್ತದೆ.. ಊಟಕ್ಕಷ್ಟೇ ಅಲ್ಲ ಲಿಫ್ಟಿಕ್ ಸೇರಿದಂತೆ ಕೆಂಪು  ಬಣ್ಣದ ಸೌಂದರ್ಯ ವರ್ಧಕಗಳಿಗೂ ಮೆಣಸಿನಕಾಯಿ ಬಳಸಲಾಗುತ್ತದೆ. ಬಳ್ಳಾರಿ ಯಲ್ಲಿ  ಭತ್ತದ ಜೊತೆ ಅತಿಹೆಚ್ಚು ಬೆಳೆಯೋ ಬೆಳೆ ಅಂದ್ರೇ, ಅದು ಕೆಂಪು ಮೆಣಸಿನ ಕಾಯಿ.

ಕಳೆದ ಮೂರು ವರ್ಷದಿಂದ ಉತ್ತಮ ಇಳುವರಿ ಇಲ್ಲದೇ ಮೆಣಸಿನಕಾಯಿ ಬೆಳೆದು ನಷ್ಟ ಹೊಂದುತ್ತಿದ್ದ ಬಳ್ಳಾರಿ ರೈತರಿಗೆ ಈ ಬಾರಿ ಮೆಣಸಿನಕಾಯಿ ಬೆಳೆ ಒಂದಷ್ಟು ಕೈ ಹಿಡಿದಿತ್ತು. ಉತ್ತಮ ಮಳೆ ಬಂದ ಹಿನ್ನೆಲೆ ಇಳುವರಿ ಕೂಡ ಉತ್ತಮವಾಗಿ ಬಂದಿತ್ತು. ಆದ್ರೇ, ಇದೀಗ ಚೀನಾದಲ್ಲಿ ಕರೋನಾ ವೈರಸ್ ಎಫೆಕ್ಟ್ನಿಂದಾಗಿ ಮೆಣಸಿ ಕಾಯಿ ರಫ್ತು ಸ್ಥಗಿತಗೊಳಿಸಲಾಗಿದೆ. ಪರಿಣಾಮ ಮೆಣಸಿನಕಾಯಿ ಬೆಲೆ ದಿಢೀರನೇ ಕುಸಿದಿದ್ದು, ಅನ್ನದಾತ ಕಂಗಾಲಾಗಿದ್ದಾನೆ.

ಕಳೆದ 15 ದಿನಗಳ ಹಿಂದೆ ಬ್ಯಾಡಗಿ, ಬಳ್ಳಾರಿ  ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ  ಒಂದು ಕ್ವಿಂಟಲ್‌ಗೆ ಕೆಂಪು ಮೆಣಸಿನಕಾಯಿಗೆ 20 ರಿಂದ 25 ಸಾವಿರ ಬೆಲೆಯಿತ್ತು. ಆದರೆ, ಇದೀಗ ಏಕಾಏಕಿ ಕ್ವಿಂಟಾಲ್‌ಗೆ ಕೇವಲ 10 ರಿಂದ 12ಸಾವಿರ ರೂ.  ಇಳಿಮುಖವಾಗಿದೆ.   ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರಗುಪ್ಪ, ಬಳ್ಳಾರಿ ತಾಲೂಕಿನಲ್ಲಿ ಅತಿಹೆಚ್ಚು ಕೆಂಪು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ.

ವಿಶೇಷವಾಗಿ ಡಬ್ಬಿ ಬ್ಯಾಡಗಿ, ಸಿಜೆಂಟಾ  ಥಳಿಯ ಮೆಣಸಿನಕಾಯಿಯನ್ನು ಅತಿಹೆಚ್ಚು ಬೆಳೆಯಲಾಗಿದೆ. ಈ ಮೆಣಸಿನಕಾಯಿ ಕೇವಲ ಆಹಾರಕ್ಕೆ ಮಾತ್ರವಲ್ಲದೆ ಲಿಫ್ಟಿಕ್ ಸೇರಿದಂತೆ ಇನ್ನಿತರ ಕೆಂಪು ಬಣ್ಣದ ಸೌಂದ ರ್ಯವರ್ಧಕ  ವಸ್ತುಗಳ ತಯಾರಿಕೆಗೂ ಬಳಸುತ್ತಾರೆ. ಧಿಡೀರ್ ಕುಸಿತದಿಂದ  ಬಳ್ಳಾರಿ ಯ ಇಪ್ಪತ್ತು ಸಾವಿರಕ್ಕೂ ಹೆಚ್ಚು ರೈತರು ಕಂಗಾಲಾಗಿದ್ದಾರೆ. ಆದ್ರೇ, ಎಪಿಎಂಸಿ  ಅಧಿಕಾರಿಗಳು ರಫ್ತು ನಿಷೇಧದ ಜೊತೆ ಈ ಬಾರಿ ಇಳುವರಿ ಹೆಚ್ಚು ಬಂದಿರೋದು ಬೆಲೆ ಇಳಿಕೆಗೆ ಕಾರಣ ಎನ್ನುತ್ತಿದ್ದಾರೆ. ಎತ್ತಿಗೆ ಜ್ವರ ಬಂದ್ರೇ, ಎಮ್ಮೆಗೆ ಬರೆ ಹಾಕಿದ್ರೂ ಎನ್ನುವ ಮಾತಿನಂತೆ ಇದೀಗ ಚೈನಾದಲ್ಲಿನ ವೈರಸ್ ಬಳ್ಳಾರಿ ರೈತರ ಮೇಲೆ ಪರಿಣಾಮ ಬೀರಿದೆ.

ಅದೇನೆ ಇರಲಿ ಅನ್ನ ದಾತ ನಷ್ಟ ಹೊಂದಲು ಕಾಲಕಾಲಕ್ಕೆ ಒಂದೊಂದು ಸಮಸ್ಯೆ ಉದ್ಭವಾಗುತ್ತದೆ ಎನ್ನು ವುದು ಈ ಪ್ರಕರಣ ಸಾಕ್ಷಿಯಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ರಫ್ತಾಗುವ ಮೆಣಸಿನಕಾಯಿಯನ್ನು ಗೋದಾಮಿನಲ್ಲಿ ಸ್ಟಾಕ್ ಇಡಲು ಅನುಕೂಲ ಮಾಡಿಕೊಡ ಬೇಕಿದೆ ಇಲ್ಲವಾದಲ್ಲಿ ರೈತ ಮತ್ತಷ್ಟು ನಷ್ಟ ಹೊಂದುವುದು ಗ್ಯಾರಂಟಿ ಎನ್ನಲಾಗುತ್ತಿದೆ…

Previous ಈ ಬಾರಿ ಹೆಚ್ಚಳವಾಗಲಿದೆಯೇ ಬಳ್ಳಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ?
Next ನೀರಿಲ್ಲದೆ ಒಣಗುತ್ತಿದೆ ಹೈಟೆಕ್ ಉದ್ಯಾನವನ !

You might also like

ಕಾನೂನು ಸುವ್ಯವಸ್ಥೆ; ಸೂಕ್ತ ಕ್ರಮಕ್ಕೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ.

ಬೆಳಗಾವಿ, ಏ.೪ ಲಾಕ್ ಡೌನ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗತ್ಯ ಪೊಲೀಸ್ ಬಂದೋಸ್ತ್ ಮತ್ತಿತರ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಯಂತ್ರಿಸಬೇಕು. ಜನರಿಗೆ ದಿನಬಳಕೆ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅನಾನುಕೂಲ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ

ಸಿದ್ಧಗಂಗಾ ಮಠದಿಂದ ಸಿಎಂ ಪರಿಹಾರ ನಿಧಿಗೆ ೫೦ಲಕ್ಷ ರೂ. ದೇಣಿಗೆ.

ತುಮಕೂರು ಏ.೪ ಕೊರೋನಾ ವೈರಸ್ ಕೋವಿಡ್-೧೯ ಸೋಂಕು ನಿಯಂತ್ರಣಕ್ಕಾಗಿ ಸಿದ್ಧಗಂಗಾ ಮಠ ಹಾಗೂ ಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ ೫೦ಲಕ್ಷ ರೂ.ಗಳ ಡಿಡಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.   ಸಿದ್ಧಗಂಗಾ ಮಠದಲ್ಲಿಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಸಿದ್ಧಗಂಗಾ ಮಠದಿಂದ ೨೫ಲಕ್ಷ

ಹುಲಿಯ ಹಾಲಿನ ಮೇವು ಸಿನಿಮಾದಲ್ಲಿ ವರನಟ ಡಾ.ರಾಜ್ ರೊಂದಿಗೆ ಸೆಣಸಿದ ಪೈಲ್ವಾನ್ ಗೌಡಪ್ಪ.

ಧಾರವಾಡ . ನಗರದಿಂದ ಕೂಗಳತೆಯ ದೂರದಲ್ಲಿರುವ ತಡಸಿನಕೊಪ್ಪ ಗ್ರಾಮ ಒಂದು ಅರ್ಥದಲ್ಲಿ ಪೈಲ್ವಾನರ ಊರೇ ಸರಿ. ಇಲ್ಲಿನ ಪ್ರತಿ ಮನೆಗಳಲ್ಲಿಯೂ ಕುಸ್ತಿಪಟುಗಳಿದ್ದಾರೆ. ಅವರಲ್ಲಿ ಕುಸ್ತಿಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿರುವ ಹಿರಿಯ ಪೈಲ್ವಾನ್‍ರೊಬ್ಬರಿದ್ದಾರೆ. 1979 ರಲ್ಲಿ ತೆರೆಕಂಡ ಹುಲಿಯ ಹಾಲಿನ ಮೇವು ಸಿನೆಮಾದಲ್ಲಿ ವರನಟ

0 Comments

No Comments Yet!

You can be first to comment this post!

Leave a Reply