ಈ ಕೋವಿಡ್-19 ನಿಂದ ಪಾರಾಗಬಹುದಾಗಿದೆ.

ಈ ಕೋವಿಡ್-19 ನಿಂದ ಪಾರಾಗಬಹುದಾಗಿದೆ.

ನಿಯಮಿತವಾಗಿ ಬಿಸಿ ನೀರು ಕುಡಿಯಬೇಕು. ಪ್ರತಿದಿನ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸಬೇಕು. ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸಬೇಕು. ಆಯುರ್ವೇದ ಪದ್ಧತಿಯಲ್ಲಿ ಹೇಳಲಾದ ದಿನಚರ್ಯ ಹಾಗೂ ಋತುಚರ್ಯೆಯನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯವನ್ನು ಗಳಿಸಬಹುದು.

ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಎರಡು ಮೂಗಿನ ಹೊಳ್ಳೆಗೆ ದಿನಕ್ಕೆರಡು ಬಾರಿ ಸವರಿಕೊಳ್ಳುವುದು. ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 2-3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು ನಂತರ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದನ್ನೂ ದಿನಕ್ಕೆರಡು ಬಾರಿ ಮಾಡುವುದು. ಒಣಕೆಮ್ಮು ಹಾಗೂ ಗಂಟಲು ಕೆರೆತವಿದ್ದಲ್ಲಿ ಪುದೀನ ಎಲೆ ಅಥವಾ ಓಮದ ಕಾಳುಗಳನ್ನು ಕುದಿಯುವ ನೀರಿನಲ್ಲಿ 5ಹಾಕಿ ಹಬೆ(ಆವಿ)ಯನ್ನು ದಿನಕ್ಕೆ ಒಂದು ಬಾರಿ ತೆಗೆದುಕೊಳ್ಳುವುದು. ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2-3 ಬಾರಿ ಸೇವಿಸುವುದು. ಈ ವಿಧಾನಗಳನ್ನು ರೋಗದ ಲಕ್ಷಣಗಳು ಕಡಿಮೆ ಇದ್ದಾಗ ಅನುಸರಿಸಿ. ಹಾಗೇ ಮುಂದುವರಿದಲ್ಲಿ ವೈದ್ಯರ ಸಲಹೆ ಪಡೆಯಬೇಕು.

Previous ಎಂದೇ ಕುಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ.
Next ಲಾಕ್ಡೌನ್ ಆದೇಶ ಉಲ್ಲಂಘನೆ: 1374 ದ್ವಿಚಕ್ರ ವಾಹನ ಜಪ್ತಿ.

You might also like

0 Comments

No Comments Yet!

You can be first to comment this post!

Leave a Reply